“ಚಿಕ್ಕೋಡಿ ಪಟ್ಟಣದಲ್ಲಿ ಭಗವಾನ ಮಹಾವೀರ ರ 2623 ನೇಯ ಜನ್ಮೋತ್ಸವವು ವಿಜ್ರಂಬನೆಯಿಂದ ಜರುಗಿತು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಪಟ್ಟಣದಲ್ಲಿ ಭಗವಾನ ಮಹಾವೀರ ರ 2623 ನೇಯ ಜನ್ಮೋತ್ಸವವು ವಿಜ್ರಂಬನೆಯಿಂದ ಜರುಗಿತು.
ಜೈನ ಧರ್ಮೀಯರಿಂದ ಜಗತ್ತಿಗೆ ಅಹಿಂಸಾ ಮಾರ್ಗವನ್ನು ತೋರಿರುವ, ಭಗವಾನ ಮಹಾವೀರ ಸ್ವಾಮಿಯ 2623 ನೇಯ, ಜನ್ಮ ದಿನೋತ್ಸವವನ್ನು ಪಟ್ಟಣದಲ್ಲಿ ಅತೀ ವಿಕ್ರಂಬನೆಯಿಂದ ಆಚರಿಸಿದರು.

ಜೈನ ಪೇಟೆಯ ಆದಿನಾಥ ಮಂದಿರದಲ್ಲಿ ಬೆಳಿಗ್ಗೆ ಅಭಿಶೇಕ ಪೂಜಾ ವಿಧಾನಗಳನ್ನು ಮುಗಿಸಿ, ಅಲ್ಲಿಂದ ಆರಂಭವಾದ ಪಲ್ಲಕ್ಕಿ ಮತ್ತು ಮಹಾವೀರ ಪ್ರಭುವಿನ ಭಾವಚಿತ್ರದ ಮೆರವಣಿಗೆ, ಮಹಿಳೆಯರ ಝಾಂಜ್ ಪತಕ್ ವಾದ್ಯದೊಂದಿಗೆ, ಅಹಿಂಸಾ ಪರಮೋ ಧರ್ಮ, ಶಾಂತ ಧರ್ಮ, ಜೈನ ಧರ್ಮ, ವಿಶ್ವ ಧರ್ಮ, ಹೀಗೆ ಹಲವಾರು ಘೋಷನೆಗಳೊಂದಿಗೆ, ಗುರುವಾರ ಪೇಟೆ, ಕಿತ್ತೂರು ಚೆನ್ನಮ್ಮ ರಸ್ತೆ, ಎನ್ ಎಮ್ ರಸ್ತೆ ಮಾರ್ಗವಾಗಿ ಮಹಾವೀರ ನಗರ ಮಂದಿರಕ್ಕೆ ಸೇರಿ, ಅಲ್ಲಿ ಪೂಜಾ ಮುಗಿಸಿಕೊಂಡು, ಬಸ್ ನಿಲ್ದಾಣದ ಹತ್ತಿರ ಮಹಾವೀರ ವೃತ್ತದಲ್ಲಿ ಪೂಜಾ ಮುಗಿಸಿಕೊಂಡು, ಸ್ವೈತಾಂಬರ ಮಂದಿರದ ಮೂಲಕ, ಹೊಸಪೇಟ ಗಲ್ಲಿಯ ಮಂದಿರದಲ್ಲಿ ಪೂಜಾ ಮುಗಿಸಿಕೊಂಡು, ಒತ್ತಾರಿ ಗಲ್ಲಿ ಮೂಲಕ ಜೈನ್ ಪೇಟೆಯ ಆದಿನಾಥ ಮಂದಿರದಲ್ಲಿ ಮೆರವಣಿಗೆ ಮುಕ್ತಾಗೊಂಡಿತು,

ಮದ್ಯಾಹ್ನ ಶ್ರಾವಕ ಶಾವಕಿಯರಿಗಾಗಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು, ಸಂಜೆಯ ಸಮಯಕ್ಕೆ ಜೈನ ಪೇಟ ಮಂದಿರದಲ್ಲಿ, ಜನ್ಮ ಕಲ್ಯಾಣ ಸೇರಿದಂತೆ, ಹಲವಾರು ಮನೊರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಸಂಧರ್ಭದಲ್ಲಿ ವರ್ಧಮಾನ ಸದಲಗೆ, ದರ್ಶನ ಉಪಾಧ್ಯೆ, ಬಾಹುಬಲಿ ನಸಲಾಪುರೆ, ಡಾ. ಪದ್ಮರಾಜ ಪಾಟೀಲ, ಸಚೀನ ಮೆಕ್ಕಳಕಿ, ರಾಜು ಬೋರಗಾವೆ, ಚಂದ್ರಕಾಂತ ಹುಕ್ಕೇರಿ, ಡಾ‌ ಸಂಜಯ ಪಾಟೀಲ, ರಾಮಚಂದ್ರ ಚೌಗುಲೆ, ಶೀತಲ ಹಜಾರೆ, ರಾಜು ಬಡಬಡೆ, ರಾಜೇಂದ್ರ ಪಾಟೀಲ, ಮಹೇಂದ್ರ ಶಹಾ, ಶಿರೀಶ ಮೆಹತಾ, ಅಮಿತ ಶಹಾ, ರಾಜು ರೋಖಡೆ, ಎಸ್.ಟಿ.ಮುನ್ನೋಳಿ, ರಾವಸಾಹೇಬ ಕೇಸ್ತಿ, ಡಾ. ಬಾಬಾಸಾಹೇಬ ಪಾಟೀಲ ಸೇರಿದಂತೆ ನೂರಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು..


Share with Your friends

You May Also Like

More From Author

+ There are no comments

Add yours