ಯುವಕರ ಮತದಾನ  ಜಾಗೃತಿಗಾಗಿ ಕ್ರಿಕೆಟ ಪಂದ್ಯಾವಳಿ    

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ    

ಚಿಕ್ಕೋಡಿ  :–

18 ವರ್ಷ ತುಂಬಿದ ಅರ್ಹ ಯುವ ಮತದಾರರು ತಪ್ಪದೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಡಾ|| ಕೃಷ್ಣರಾಜ, ಅವರು ಹೇಳಿದರು.

ತಾಲ್ಲೂಕಿನ ಸಿಇಟಿ ಸಂಸ್ಥೆಯ ಆರ್ ಡಿ ಕಾಲೇಜ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಬೆಳಗಾವಿ, ತಾಲೂಕಾ ಆಡಳಿತ ಚಿಕ್ಕೋಡಿ, ತಾಲೂಕಾ ಪಂಚಾಯತ, ತಾಲೂಕಾ ಸ್ವೀಪ್ ಸಮಿತಿ, ಚಿಕ್ಕೋಡಿ,  ಶಿಕ್ಷಣ ಇಲಾಖೆ, ಪುರಸಭೆ ಚಿಕ್ಕೋಡಿ  ಸಹಯೋಗದಲ್ಲಿ, ಲೋಕಸಭಾ ಸಾರ್ವತ್ರಿಕ ಚುನಾವಣೆ -2024 ರ ನಿಮಿತ್ಯ ಮತದಾನ ಜಾಗೃತಿಯ ಸ್ವೀಪ್ ಚಟುವಟಿಕೆಯ ಕ್ರಿಕೆಟ ಪಂದ್ಯಾವಳಿ  ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಪ್ರಜೆಗಳು ಆಯ್ಕೆ ಮಾಡುವ ಅವಕಾಶ ಇರುವುದರಿಂದ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿದರು..

ಚಿಕ್ಕೋಡಿ ಲೋಕಸಬಾ ಸಾರ್ವತ್ರಿಕ ಚುನಾವಣೆಯ ಚಿಕ್ಕೋಡಿ ವಿಭಾಗ ಮಟ್ಟದ ಕ್ರಿಕೆಟ ಪಂದ್ಯಾವಳಿಯಲ್ಲಿ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ರಾಯಬಾಗ, ಕಾಗವಾಡ ಅಥಣಿ ತಾಲ್ಲೂಕಿನಿಂದ ತಂಡಗಳು ಭಾಗವಹಿಸಿದ್ದವು. ಚಿಕ್ಕೋಡಿ ತಾಲ್ಲೂಕಿನ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಹುಕ್ಕೇರಿ ತಂಡವು ದ್ವಿತೀಯ ಬಹುಮಾನ  ಪಡೆದುಕೊಂಡಿತು  ನಿಪ್ಪಾಣಿ ತಂಡ ತೃತಿಯ ಬಹುಮಾನ ಕ್ಕೆ ತೃಪ್ತಿಕೊಂಡಿತು.

ಈ ಸಂದರ್ಭದಲ್ಲಿ ಲೆಕ್ಕಾಧಿಕಾರಿಗಳಾದ ಗಂಗಾ ಹಿರೇಮಠ , ತಹಶಿಲ್ದಾರಾದ ಚಿದಂಬರ ಕುಲಕರ್ಣಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಜಗದೀಶ ಕಮ್ಮಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ ಎನ್ ಮಕ್ಕನಮರಡಿ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ,   ಸಹಾಯಕ ನಿರ್ದೇಶಕರು(ಗ್ರಾಉ) ಶಿವಾನಂದ ಶಿರಗಾಂವೆ, ಸಹಾಯಕ ನಿರ್ದೇಶಕ (ಪಂ.ರಾ) ಎಸ್.ಎಸ್. ಮಠದ, ,ಡಿ.ಐ.ಇ.ಸಿ ಸಂಯೋಜಕರಾದ ಪ್ರಮೋದ ಗೋಡೆಕರ, ಎಸ್.ಬಿ.ಎಮ್ ಸಂಯೋಜಕರಾದ ಬಾಹುಬಲಿ ಮಳವಂಕಿ ,  ಐ.ಇ.ಸಿ ಸಂಯೋಜಕ ರಂಜಿತ ಕಾರ್ಣಿಕ, ಎಮ್.ಆಯ್.ಎಸ್ ಸಂಯೋಜಕ ಚೇತನ ಶಿರಹಟ್ಟಿ, ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ ಸ್ವೀಪ್, ಎನ್ ಆರ್ ಎಲ್ ಎಮ್ ಸೂಪರವೈಸರ್ ಬಸವರಾಜ, ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours