“ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸುವುದರ ಮೂಲಕ ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ,ಶಾಸಕ,ಗಣೇಶ ಹುಕ್ಕೇರಿ ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿದ ರೈತರ ಪಾಲಿಗೆ ಭಗೀರತರಾಗಿದ್ದಾರೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಬರದ ನಾಡಿಗೆ ಭಗೀರಥರಾದ ಅಪ್ಪ-ಮಗ.

ಮುಂಗಾರು ಮಳೆ ಕೈತಪ್ಪಿರುವ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸುವುದರ ಮೂಲಕ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ
ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿದ ರೈತರ ಪಾಲಿಗೆ ಭಗೀರತರಾಗಿದ್ದಾರೆ.

ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಶ್ರೀ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆಯಡಿ ಕಲ್ಲೋಳ ಬಳಿ ಕೃಷ್ಣಾ ನದಿಯಿಂದ ಅತ್ಯಾಧುನಿಕ ಯಂತ್ರಗಳಿಂದ ನೀರು ಎತ್ತಿ, ಅಲ್ಲಿಂದ 15 ಕಿಮೀ ದೂರದಲ್ಲಿರುವ ಚಿಕ್ಕೋಡಿ ಬಲದಂಡೆ ಕಾಲುವೆಗೆ ಸಂಬಂಧಿಸಿದ ಬ್ರ್ಯಾಂಚ್ ಕೆನಾಲ್‌ಗೆ ನೀರು ಹರಿಸಿ, ಚಿಕ್ಕಲವಾಳ ಗ್ರಾಮದ ಕೊನೆಯ ಹಂತದ ವರೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಕೆನಾಲ್ ಮುಖಾಂತರ ನೀರು ಹರಿಸಿ ಸುಮಾರು ೩೦ ಎಕರೆ ವಿಸ್ತೀರ್ಣದ ನೇಜ ಕೆರೆ ಹಾಗೂ ವಡಗೋಲ ಗ್ರಾಮದ ಕೆರೆ ಗಳನ್ನು ಸಂಪೂರ್ಣ ಭರ್ತಿ ಮಾಡಲಾಗಿದೆ.

ಕೆರೆ ಭರ್ತಿಯಿಂದ ಈಗ ಅಂತರ್ಜಲ ಹೆಚ್ಚಳ ಜೊತೆ ನೀರಿನ‌ ಸಮಸ್ಯೆ ನೀಗಿದೆ. ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮದ ಜನರಿಗೆ ಈಗ ನೀರಿನ ದಾಹ ನೀಗಿಸುವ ಕೆಲಸವನ್ನು ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಮಾಡಿದ್ದಾರೆ.

ಭರ್ತಿಯಾದ ಕೆರೆ ನೋಡಿ ನೇಜ ಹಾಗೂ ವಡಗೋಲ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಫುಲ್‌ ಖುಷಿಯಾಗಿದ್ದಾರೆ.


ಗಣೇಶ ಹುಕ್ಕೇರಿ – ಶಾಸಕರು, ಚಿಕ್ಕೋಡಿ ಸದಲಗಾ ಮತಕ್ಷೇತ್ರ
ಚುನಾವಣೆಯ ವೇಳೆ ಜನರಿಗೆ ನೀಡಿದ್ದ ಭರವಸೆಯ ಮಾತನ್ನು ಉಳಿಸಿಕೊಂಡ ಖುಷಿ ಒಂದೆಡೆಯಾದರೆ, ನನ್ನ ಹಾಗೂ ನಮ್ಮ ನಾಯಕರಾದ ಪ್ರಕಾಶಣ್ಣಾ ಹುಕ್ಕೇರಿ ಅವರ ಪ್ರಯತ್ನದಿಂದ ಅನ್ನಪೂರ್ಣೇಶ್ವರಿ ಏತ ನೀರಾವರಿ ಮೂಲಕ ರೈತರಿಗೆ, ಜನ ಮತ್ತು ಜಾನುವಾರುಗಳಿಗೆ ನೀರೊದಗಿಸಿದ ತೃಪ್ತಿಯಿದೆ.


ಅರುಣ ಬೋನೆ – ನೇಜ ಗ್ರಾಮದ ಮುಖಂಡರು.
ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಕಾಡುತಿತ್ತು. ಈಗ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಫಲವಾಗಿ ಕೆನಾಲ್ ಮೂಲಕ ಕೆರೆ ಭರ್ತಿ ಮಾಡಿರುವುದರಿಂದ ನೇಜ, ವಡಗೋಲ ಸೇರಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ನೀರಿನ ದಾಹ ನೀಗಿದೆ. ನಮ್ಮ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇವೆ.


Share with Your friends

You May Also Like

More From Author

+ There are no comments

Add yours