“ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಈ ಮೂಲಕ ಸೂಚಿಸಲಾಗಿದೆ, ಎಲ್ಲ ಗ್ರಾಹಕರು ಸಹಕರಿಸಲು ಕೋರಲಾಗಿದೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಆತ್ಮೀಯ ಎಲ್ಲ ವಿದ್ಯುತ್ ಗ್ರಾಹಕರಿಗೆ ವಿಶೇಷ ಸೂಚನೆ ಏನೆಂದರೆ, ನಾಳೆ ದಿನಾಂಕ -04.10.2023 ರಂದು ಅಂಕಲಿಯ 110/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ದುರಸ್ತಿ ಕಾರ್ಯ ನಿರ್ವಹಿಸಲು ಈ ಮೇಲೆ ತಿಳಿಸಿದಂತೆ ವಿದ್ಯುತ್ ನಿಲುಗಡೆ ಇರುವುದು ಎಂದು ಮೇಲಾಧಿಕಾರಿಗಳ ಆದೇಶದಂತೆ ಕಾರಣ ನಾಳೆ

110/33/11 ಕೆ.ವಿ ವಿ.ವಿ ಕೇಂದ್ರ ಅಂಕಲಿಯಲ್ಲಿನ 110ಕೆ.ವಿ ಇನ್ನಕಮರ್‌ ಬ್ರೇಕರ್‌ನ ರಿಪೇರಿ ಮತ್ತು ದುರುಸ್ತಿ ಕೆಲಸವನ್ನು ದಿನಾಂಕ 30.09.2023 ರಂದು ಆಯೋಜಿಸಲಾಗಿತ್ತು.

ತಾಂತ್ರಿಕ ಕಾರಣದಿಂದ ದಿನಾಂಕ 04.10.2023 ರಂದು ಮಾಡಲು ನಿರ್ಧರಿಸಿದ್ದ ಕಾರಣ II0/33/11 ಕೆ.ವಿ ವಿ.ವಿ ಕೇಂದ್ರ ಅಂಕಲಿಯಿಂದ ಪೂರೈಸುವ 33ಕೆ.ವಿ ಖೋತವಾಡಿ, ಶಿರಗುಪ್ಪಿ ಮತ್ತು ನಂದಿಕುರಳಿ ಹಾಗೂ ಎಲ್ಲ 11 ಕೆ.ವಿ ವಿದ್ಯುತ್‌ ಮಾರ್ಗಗಳಿಗೆ ದಿನಾಂಕ 04.10.2023 ರಂದು ಮುಂಜಾನೆ 10:00 ರಿಂದ ಮಧ್ಯಾಹ್ನ 4:00 ಗಂಟೆಯವರೆಗೆ ವಿದ್ಯುತ್‌ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವದು.

ಸದರಿ ವಿಷಯದ ಬಗ್ಗೆ ಗ್ರಾಹಕರಿಗೆ ದಿನಪತ್ರಿಕೆ ಮೂಲಕ ವಿದ್ಯುತ್‌ ವ್ಯತ್ಯಯ ಬಗ್ಗೆ ತಿಳಿಸಲು ಕೋರಲಾಗಿದೆ. ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ಮೂಲಕ ಎಲ್ಲ ಗ್ರಾಹಕರು ಸಹಕರಿಸಲು ಕೋರಲಾಗಿದೆ


Share with Your friends

You May Also Like

More From Author

+ There are no comments

Add yours