“ಜೊಲ್ಲೆ ಶಿಕ್ಷಣ ಸಂಸ್ಥೆಯ, ಶಿವಶಂಕರ ಜೊಲ್ಲೆ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್ ವಿವಿಧ ಅಂಗ ಸಂಸ್ಥೆಗಳ ಸಹಯೋಗದಲ್ಲಿ ನಣದಿ ಕ್ಯಾಂಪಸ್‌ನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಜೊಲ್ಲೆ ಶಿಕ್ಷಣ ಸಂಸ್ಥೆಯ, ಶಿವಶಂಕರ ಜೊಲ್ಲೆ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್, ಹಾಗೂ ವಿವಿಧ ಅಂಗ ಸಂಸ್ಥೆಗಳ ಸಹಯೋಗದಲ್ಲಿ ತಾಲುಕಿನ ನಣದಿ ಕ್ಯಾಂಪಸ್‌ನಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.

ಬೀರೇಶ್ವರ ಕೋ-ಆಪ್ ಕ್ರೇಡಿಟ್ ಸೊಸಾಯಿಟಿ ಲಿ, ಯಕ್ಸಂಬಾ (ಮಲ್ಟಿಸ್ಟೇಟ್) ಅಧ್ಯಕ್ಷರಾದ ಜಯಾನಂದ ಜಾಧವ ಧ್ವಜಾರೋಹಣವನ್ನು ನೆರವೇರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆಯು ಅಪಾರವಾದುದು. ಸಂವಿಧಾನವು ಸ್ವಾತಂತ್ರö್ಯ, ಸಮಾನತೆ, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡುವುದರ ಮೂಲಕ ಭಾರತೀಯ ಪ್ರಜೆಗಳ ಘಣತೆಯನ್ನು ಎತ್ತಿ ಹಿಡಿದಿದೆ.ಸ್ವಾತಂತ್ರ್ಯ ತೊಸ್ತವದ ನಂತರ ಭಾರತವು ಕೃಷಿ, ಕೈಗಾರಿಕೆ, ಆರ್ಥಿಕ, ಶಿಕ್ಷಣ, ವಿಜ್ಞಾನ, ವೈದ್ಯಕೀಯ ಇತರೆ ಕ್ಷೇತ್ರಗಳಲ್ಲಿ ಗುರುತರವಾದ ಸಾಧನೆಗೈಯುವುದರ ಮೂಲಕ ಜಗತ್ತಿನ ಮುಂಚೂಣ ರಾಷ್ಟçಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಭಾರತೀಯನು ಸಂವಿಧಾನದ ಮೌಲ್ಯಗಳ ತಳಹದಿಯ ಮೇಲೆ ಬದುಕನ್ನು ನಿರ್ವಹಿಸಬೇಕು ಎಂದರು. ಶಾಲೆಯ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಪಥಸಂಚಲನ. ಭಾಷಣ, ದೇಶ ಭಕ್ತಿ ಗೀತೆ, ನೃತ್ಯ, ಮುಂತಾದವುಗಳ ಮೂಲಕ ದೇಶಾಭಿಮಾನವನ್ನು ಮೆರೆದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಗೀತಾ ನಾಯ್ಡು, ಸಿದ್ರಾಮ ಗಡದೆ, ಲಕ್ಮಣ ಕಬಾಡೆ, ಆರ್. ಸಿ ಚೌಗಲೆ, ಆನಂದಮೂರ್ತಿ ಕುಲಕಣ ð, ಸಿ.ಪಿ ಬನ್ನಟ್ಟಿ, ಎ.ಪಿ ಅಕ್ಕೋಳೆ, ರಾಕೇಶ ಮಗದುಮ್ಮ, ರಾಜು ಹೀರೆಮಠ, ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದವರು ಪಾಲ್ಗೊಂಡಿದ್ದರು. ಶ್ವೇತಾ ಪಾಟೀಲ ಸ್ವಾಗತಿದರು. ಉತ್ಕರ್ಷ ಸಮಾಜೆ ಹಾಗೂ ಸಪನಾ ವಾಳಕೆ ನಿರೂಪಿಸಿದರು. ಸಾಗರ ರತ್ನಾಕರ ವಂದಿಸಿದರು.


Share with Your friends

You May Also Like

More From Author

+ There are no comments

Add yours