“ಚುನಾವಣೆಯ ಸರ್ವ ದೇಶದ ಗರ್ವವೆಂಬ ಘೋಷವಾಕ್ಯ ದೊಂದಿಗೆ ಲೋಕಸಭಾ ಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಚುನಾವಣೆಯ ಸರ್ವ ದೇಶದ ಗರ್ವವೆಂಬ ಘೋಷವಾಕ್ಯ ದೊಂದಿಗೆ ಲೋಕಸಭಾ ಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿ ಮೂಡಿಸಬೇಕಾಗುತ್ತದೆ. ಮತದಾನ ಪ್ರಜಾಪ್ರಭುತ್ವದ ಅಂಗವಾಗಿದೆ. ಪ್ರತಿಯೊಬ್ಬರಿಗೆ ಮತದಾನ ಹಕ್ಕಿದೆಯೆಂದು ಅಧ್ಯಕ್ಷರು ತಾಲೂಕ ಸ್ವೀಪ್‌ ಸಮೀತಿ , ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಗಧೀಶ ಕಮ್ಮಾರ ಹೇಳಿದರು. 

          ಬುಧವಾರ ತಾಲೂಕ ಪಂಚಾಯತ ಸಭಾಭವನದಲ್ಲಿ  ಬ್ಯಾಂಕ್‌ ಬಿ.ಎಲ್.ಬಿ.ಸಿ ಸಭೆ ಹಾಗೂ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರಿಗೆ ಗಟ್ಟಿ ಓದು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬಿರುವ ಪ್ರಮುಖ ನಾಗರಿಕ ಕರ್ತವ್ಯವಾಗಿದೆ. ತಾಲೂಕಿನಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳಲ್ಲಿ ಹಾಗೂ ಯುವ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ತಾಲೂಕನಲ್ಲಿ ಮತದಾನವಾಗುವಂತೆ ನೋಡಿಕೊಳ್ಳಬೇಕು. ಪ್ರತಿ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಜನರಿಗೆ ಮತದಾನ ಮಾಡುವಂತೆ ತಿಳಿವಳಿಕೆ ನೀಡಲಾಗುತ್ತದೆ ಹಾಗೂ ತಾಲೂಕ ಎಲ್ಲ ಬ್ಯಾಂಕಗಳಲ್ಲಿ ಮತ್ತು ಗ್ರಂಥಾಲಯಗಳಲ್ಲಿ ಬ್ಯಾನರಗಳನ್ನು ಅಳವಡಿಸಿ ಮತದಾನ ಜಾಗೃತಿ ಮೂಡಿಸಬೇಕೆಂದು ಹೇಳಿದರು. 

        ಜೊತೆಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬ್ಯಾಂಕ‌ ಅಧಿಕಾರಿಗಳಿಗೆ ಹಾಗೂ ಗ್ರಂಥಾಲಯ ಮೇಲ್ವಿಚಾರಕರುಗಳಿಗೆ ಭೋಧಿಸಿದರು. 

           ಈ ಸಂಧರ್ಭದಲ್ಲಿ ಸಹಾಯಕ ನಿರ್ಧೇಶಕರಾದ ಶಿವಾನಂದ ಶಿರಗಾಂವಿ, ವ್ಯವಸ್ಥಾಪಕರು ಉದಯಗೌಡ ಪಾಟೀಲ, ವಿಷಯ ನಿರ್ವಾಹಕರು ಶ್ರೀದೇವಿ ನಡಿವಿನಕೇರಿ , ಐ.ಇ.ಸಿ ಸಂಯೋಜರಾದ ರಂಜೀತ ಕಾರ್ಣಿಕ, ಎನ್.ಆರ್.ಎಲ್.ಎಮ್. ವಲಯ ಮೇಲ್ವಿಚಾರಕಾರದ ಬಸವರಾಜ ದೊಡ್ಡನಿಂಗಪ್ಪಗೋಳ,  ಎನ್.ಆರ್.ಎಲ್.ಎಮ್. ಬ್ಲಾಕ್‌ ಮ್ಯಾನೇಜರ್ ಬಸವರಾಜ ಕೋಟಬಾಗಿ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours