“ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳು, ಕೋಯ್ನಾ,ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ೩ ಟಿಎಮ್‌ಸಿ ನೀರು, ಚಿತ್ರಾ ಅಣೆಕಟ್ಟಿನಿಂದ ಹಿರಣ್ಯಕೇಶಿಗೆ ೧ ಟಿ.ಎಂ.ಸಿ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಮುಂಬೈ :–

ಕೃಷ್ಣಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ಶೀಘ್ರವೇ ನೀರು ಬಿಡುವಂತೆ  ಚಿಕ್ಕೋಡಿ ಸಂಸದರಾದ  ಅಣ್ಣಾಸಾಹೇಬ ಜೊಲ್ಲೆ, ಹಾಗೂ ಶಾಸಕಿ ಶಶಿಕಲಾ ಜೊಲ್ಲೆ  ಅವರ ನೇತೃತ್ವದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಶಾಸಕರ ನೇತೃತ್ವದ ನಿಯೋಗ ಮಹಾರಾಷ್ಟ್ರದ ಡಿ.ಸಿ.ಎಂ. ದೇವೇಂದ್ರ ಫಡ್ನವೀಸ್  ಅವರಿಗೆ ಮನವಿ ಮಾಡಿ ವಿನಂತಿಸಿದರು.

ನಿಯೋಗ ಶನಿವಾರ ಮುಂಬೈ ನಗರದಲ್ಲಿ ಮಹಾರಾಷ್ಟ್ರದ  ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್  ಅವರನ್ನು ಭೇಟಿಯಾಗಿ ಈ ವರ್ಷ ಮಳೆ ಇಲ್ಲದೇ ನದಿಗಳು ಬತ್ತಿ ಹೋಗಿದ್ದು ಜನ,ಜಾನುವಾರುಗಳು ಕುಡಿಯುವ ನೀರು ಇಲ್ಲದೇ ಪರದಾಡುವಂರಾಗಿದೆ. ಆದ್ದರಿಂದ ನಮ್ಮ ನದಿಗಳಿಗೆ ಬೆಸಿಗೆಯಲ್ಲಿ ಬಿಡಬೇಕಾದ ನೀರಿನ ಪಾಲನ್ನು  ಮಹಾರಾಷ್ಟ್ರದಿಂದ ಕೃಷ್ಣಾ, ವೇದಗಂಗಾ ನದಿಗೆ ಹಾಗೂ ಹಿಡಕಲ್ ಜಲಾಶಯಕ್ಕೆ ನೀರನ್ನು ಬಿಡುವಂತೆ ಮನವಿ ಸಲ್ಲಿಸಿದರು.

ಜಾನುವಾರುಗಳಿಗೆ ಹಾಗೂ ಜನರ ನಿತ್ಯ ಉಪಯೋಗಕ್ಕಾಗಿ ಹಾಗೂ ನದಿ ತೀರದ ಕೃಷಿಗೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಇಲ್ಲದೇ ಗ್ರಾಮೀಣ ಪ್ರದೇಶದ ಜನ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ತೊಂದರೆ ಅನುಭವಿಸುತ್ತಿದ್ದು ಶೀಘ್ರ ಕೃಷ್ಣಾ ಹಾಗೂ ಹಿರಣ್ಯಕೇಶಿ ವೆದಾಗಂಗಾ  ನದಿಗಳಿಗೆ ನೀರು ಬಿಡುವಂತೆ ಮನವಿಯನ್ನು ಕ್ಷೇತ್ರದ ಎಲ್ಲ ಶಾಸಕರು  ನೀಡಿದ್ದಾರೆ.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟçದ ಉಪಮುಖ್ಯಮಂತ್ರಿಗಳು, ಕೋಯ್ನಾ ಮತ್ತು ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ೩ ಟಿಎಮ್‌ಸಿ ನೀರು ಮತ್ತು ಚಿತ್ರಾ ಅಣೆಕಟ್ಟಿನಿಂದ ಹಿರಣ್ಯಕೇಶಿಗೆ ೧ ಟಿ.ಎಂ.ಸಿ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಕ್ಷೇತ್ರದ ಜನರ ಪರವಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಮಾಜಿ ಸಚಿವರಾದ  ಶ್ರೀಮಂತ ಪಾಟೀಲ, ಶಾಸಕರಾದ ದುರ್ಯೋಧನ ಐಹೊಳೆ, ನಿಖೀಲ ಕತ್ತಿ,,ರೈತ ಮೋರ್ಚಾ ಅಧ್ಯಕ್ಷ ಎಸ್.ಮುದಕಣ್ಣವರ ಉಪಸ್ಥಿತರಿದ್ದರು.

ಕೃಷ್ಣಾ ಹಾಗೂ ಉಪನದಿಗಳ ತೀರದ ಜನರು  ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದು ಕೂಡಲೇ ಕೋಯ್ನಾ ಮತ್ತು ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ೩ ಟಿಎಮ್‌ಸಿ ನೀರು ಮತ್ತು ಚಿತ್ರಾ ಅಣೆಕಟ್ಟಿನಿಂದ ಹಿರಣ್ಯಕೇಶಿಗೆ ೧ ಟಿ.ಎಂ.ಸಿ ನೀರು ಬಿಡುವಂತೆ ಮಹಾರಾಷ್ಟç ಡಿ.ಸಿ.ಎಂ. ದೇವೇಂದ್ರ ಫಡ್ನವೀಸ್ ಅವರಿಗೆ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದ ನಿಯೋಗ ಮನವಿ ಸಲ್ಲಿಸಿದರು.


Share with Your friends

You May Also Like

More From Author

+ There are no comments

Add yours