“ಯಕ್ಸಂಬಾ ಪಟ್ಟಣದಲ್ಲಿ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ತಾಲುಕಿನ ಯಕ್ಸಂಬಾ ಪಟ್ಟಣದಲ್ಲಿ

ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ನಡೆದ ಘಟನೆ

ಆತ ಸೌಮ್ಯ ಸ್ವಭಾವದ ವ್ಯಕ್ತಿ. ಊರಲ್ಲಿ ಯಾರೊಂದಿಗೂ ಜಗಳಕ್ಕಿಳಿಯದವ. ನಿನ್ನೆ ಗ್ರಾಮದ ಗ್ರಾಮದೇವತೆಯ ಜಾತ್ರೆಯ ರಸಮಂಜರಿ ಕಾರ್ಯಕ್ರಮ ಕಣ್ತುಂಬ ನೋಡಿ ವಾಪಸ್ ಮನೆಗೆ ತೆರಳಬೇಕಾದ್ರೆ ಯಾರೋ ಆತನ ತಲೆ‌ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾರೆ. ಹಾಗಿದ್ರೆ ಏನಿದು ಸ್ಟೋರಿ ಅಂತೀರಾ..? ಇಲ್ಲಿದೆ ನೋಡಿ ಒಂದು ವರದಿ…!

ಹೌದು… ಹೀಗೆ ರಸ್ತೆ ಪಕ್ಕದಲ್ಲಿ ಹೆಣವಾಗಿ ಬಿದ್ದಿರೋರ ಹೆಸರು ಮಹೇಶ ಕುರ್ಣೆ(೪೦) ಅಂತ. ಬೆಳಗಾವಿ ಜಿಲ್ಲೆಯ ಯಕ್ಸಂಬಾ ಪಟ್ಟಣದ ನಿವಾಸಿ. ನಿನ್ನೆ ಯಕ್ಸಂಬಾ ಪಟ್ಟಣದ ಬೀರೇಶ್ವರ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತ್ತು. ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮವನ್ನು ತಡರಾತ್ರಿವರೆಗೂ ಕಣ್ತುಂಬಿಕೊಂಡಿದ್ದ. ಆದ್ರೆ ಬೆಳ್ಳಂಬೆಳ್ಳಗೆ ಊರಿನವರಿಗೆ ಶಾಕ್ ಕಾದಿತ್ತು. ರಸಮಂಜರಿ ಕಾರ್ಯಕ್ರಮ ನೋಡಿ ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ಯಾರೋ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾರೆ. ಬೆಳ್ಳಂಬೆಳ್ಳಗೆ ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನರು ದೌಡಾಯಿಸಿದ್ದಾರೆ. ಯಾರಿಗೂ ನೋವುಂಟು ಮಾಡದ ವ್ಯಕ್ತಿ ಹೆಣವಾಗಿ ಬಿದ್ದಿದ್ದಾನೆ ಎಂದು ಗ್ರಾಮದವರು ಮಮ್ಮುಲ ಮರಗಿದ್ರು.

ಶಶಿಕಾಂತ ಕುರ್ಣೆ, ಮೃತನ ಸಂಬಂಧಿ.

ಮಹೇಶ ಕುರ್ಣಿ ಆವಾಗಾವಾಗ ಎಣ್ಣೆ ಬಿಟ್ಕೊಳ್ಳತಿದ್ರಂತೆ. ಮಹೇಶ ಅವರ ಪ್ಯಾಮಿಲಿ ಬೆಳಗಾವಿಯಲ್ಲಿ ಸೆಟಲ್ ಆಗಿದ್ದಾರೆ. ಮಕ್ಕಳ ನೌಕರಿಗಾಗಿ ಈತನು ಸಹ ಬೆಳಗಾವಿಯಲ್ಲೆ ನೆಲೆಸಿದ್ದ. ಆದ್ರೆ ಯಕ್ಸಂಬಾ ಪ್ಟಣದಲ್ಲಿರೋ ತನ್ನ ಒಂದು ಎಕರೆ ಜಮೀನು ಹಾಳಾಗುತ್ತೆ ಎನದನುವ ಕಾರಣಕ್ಕೆ ಮಹೇಶ ಯಕ್ಸಂಬಾ ಪಟ್ಟಣದಲ್ಲಿ ಒಬ್ಬನೇ ವಾಸವಾಗಿದ್ದ. ಆತನ ಸಂಬಂಧಿಕರು ಹೇಳುವಂತ, ಮಹೇಶ ಕುರ್ಣೆ ಯಾವಾಗಲಾದ್ರೂ ಮದ್ಯಸೇವನೆ ಮಾಡ್ತಿದ್ದನಂತೆ. ಊರಲ್ಲಿ ಯಾರೊಂದಿಗೂ ಜಗಳವಾಡಿರಲಿಲ್ಲವಂತೆ. ನಿನ್ನೆ ರಾತ್ರಿ ಜಾತ್ರೆ ನಿಮಿತ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ನೋಡಿ ವಾಪಸ್ಸಾಗುವ ಸಂದರ್ಭದಲ್ಲಿ ಯಾರೋ ಆತನನ್ನು ಕೊಲೆ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಉಮೇಶ ಕುರ್ಣೆ, ಮೃತ ಮಹೇಶನ ಸಂಬಂಧಿ.

ಇನ್ನು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ಆರಂಬಿಸಿದ್ದಾರೆ. ಸುತ್ತಮುತ್ತಲಿನ ಯಾವುದಾದರು ಅಂಗಡಿಗಳ ಸಿಸಿಟಿವಿ ಕ್ಯಾಮರಾಗಳಲ್ಲಿ ಕೃತ್ಯ ಸೆರೆಯಾಗಿದೆಯಾ ಎಂಬುದನ್ನು ಸಹ ಚೆಕ್ ಮಾಡಿದ್ದಾರೆ. ಸೌಮ್ಯಸ್ವಭಾವದ ಮಹೇಶ ಕುರ್ಣೆಯ ಹತ್ಯೆಯ ಹಿಂದಿನ ರಹಸ್ಯ ಪೊಲೀಸ್‌ರ ತನಿಖೆಯಿಂದ ಬಯಲಾಗಬೇಕಿದೆ.


Share with Your friends

You May Also Like

More From Author

+ There are no comments

Add yours