ಬೆಂಗಳೂರು :–
ರಾಜ್ಯದ ರಾಜಧಾನಿಯಲ್ಲಿ ಹೆಚ್‌ಎಂಪಿ ಸೋಂಕು ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, 8 ತಿಂಗಳು ಮಗುವನ್ನು ನಾಳೆ ಡಿಸ್ಟಾರ್ಜ್ ಮಾಡಲಾಗುತ್ತದೆ.
ಹೆಚ್‌ಎಂಪಿವಿ ಸೋಂಕಿಗೆ ತುತ್ತಾಗಿದ್ದ ಇಬ್ಬರೂ ಮಕ್ಕಳು ಗುಣಮುಖರಾಗಿದ್ದು, ಎಲ್ಲರೂ ಮಾಸ್ಕ್ ಹಾಕಬೇಕು, ಲಾಕ್‌ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದರು.
ಇನ್ನು ಈ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ವೈರಸ್‌ನಿಂದ ಜೀವಕ್ಕೆ ಏನೂ ಅಪಾಯವಿಲ್ಲ ಎಂದರು.
ಚೀನಾದಲ್ಲಿ ಉದ್ಭವಿಸಿರುವ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಈ ವೈರಸ್ ಹಾನಿಕಾರಕ ಎಂದು ಹೇಳಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದೃಢಪಟ್ಟಿರುವ ಸಂಗತಿ ಸಾಮಾನ್ಯವಾಗಿ ಭಯ ಹುಟ್ಟಿಸಿದೆ. ಆದರೆ ಇದು ಮೊದಲ ಪ್ರಕರಣ ಅಲ್ಲ, ILI ಯವರಿಗೆ (Influenza-like Illness) ಬೇರೆ ಬೇರೆ ವೈರಸ್ ಬರುತ್ತದೆ. ಅದರಲ್ಲಿ HMPV ಕೂಡ ಇರುತ್ತದೆ. ಈ ವೈರಸ್ ಬೇರೆ ಬೇರೆ ಸಮಸ್ಯೆಗಳು ಸೇರಿಕೊಂಡು ಬರುತ್ತದೆ ಎಂದು ವಿವರಿಸಿದರು.