ಚಿಕ್ಕೋಡಿ :–
ಜಾನಪದ ಕಲಾ ಸಂಸ್ಕೃತಿ ಪ್ರತಿಯೊಬ್ಬರ ಜೀವನದ ಅವಿಬಾಜ್ಯ ಅಂಗ ಕಲೆ ಆಸ್ವಾದಿಸುವದರಿಂದ ಮನಸ್ಸಿನ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ ಇಂದಿನ ಪ್ರಸ್ತುತ ದಿನಮಾನದಲ್ಲಿ ಒತ್ತಡ ಜೀವನದಿಂದ ಹೊರಗೆ ಬರಬೇಕೆಂದರೆ ವೈವಿಧ್ಯ ಪಾರಂಪರಿಕ ಕಲೆಗಳನ್ನು ನೋಡುವದರ ಮುಂಖಾತರ
ಕಲಾವಿದರಿಗೆ ವೇದಿಕೆ ಕಲ್ಪಿಸಿ ನಮ್ಮ ಹಳ್ಳಿಯ ಜಾನಪದ ಸಾಂಸ್ಕೃತಿಕ ಕಲೆ ಉಳಿಸಬೆಕೆಂದು ಸವದತ್ತಿಯ ಆದರ್ಶ ವಾಣಿಜ್ಯ ಕಲಾಮಹಾವಿದ್ಯಾಲಯದ ಉಪನ್ಯಾಸಕರಾದ ಸಂಜು ಮಿರ್ಜೆ ಕರೆನೀಡಿದರು ಅವರು ಕಳೆದ ದಿನಾಂಕ 05 ಜನೇವರಿ 2025 ರಂದು ಆಶಾದೀಪ ಸಮುದಾಯ ಕಲಾಕೆಂದ್ರ(ರಿ) ಚಿಕ್ಕೋಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದಲ್ಲಿ ತಾಲೂಕಿನ ಧುಳಗನವಾಡಿಯಲ್ಲಿ ಜರುಗಿದ ಕರುನಾಡ ಕಲಾ ಸೌರಭ ಕಾರ್ಯಕ್ರಮದ ಅಥಿತಿಪರ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಸಿದ್ದನಗೌಡಾ ಪಾಟೀಲ ಇವರು ಮಾತನಾಡಿ ಗಡಿನಾಡಿನಲ್ಲಿ ಕನ್ನಡ ಭಾಷೆ ಗಟ್ಟಿ ಉಳಿಸುವದರ ಜೊತೆಗೆ ನಮ್ಮ ನಾಡಿನ ಶ್ರೀಮಂತ ಸಾಂಸ್ಕೃತಿ ಕಲೆಗಳನ್ನು ಪೋಷಿಸಿ ಕಲಾವಿದರನ್ನು ಬೆಳೆಸುವುದು ಅತ್ಯಗತ್ಯವಾಗಿದೆ ಮುಂದಿನ ನಮ್ಮ ಬೆಳೆಯುವ ಮಕ್ಕಳಿಗೆ ಶಿಕ್ಷಣ ಸಂಸ್ಕಾರ ಜೊತೆಗೆ ಕಲಾಪ್ರದರ್ಶನ ನೀಡಲು ಉತ್ತೇಜನ ನೀಡಬೆಕೆಂದರು. ಕೇರೂರದ ಜೋತಿರ್ಲಿಂಗ ಶರಣರು ಸಾನಿಧ್ಯ ವಹಿಸಿದರು ಕಾರ್ಯಕ್ರಮವನ್ನು ಅಶೋಕ ಚೌಗಲೆ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡದರು ವಾಳಕಿಯ ಶಿವಶಕ್ತಿ ಸಿದ್ದಾಶ್ರಮದ ಕುಮಾರ ಶರಣರು ಹಾಗೂ ರಮೇಶ ಖೋತ ಉಪಸ್ಥಿತರಿದ್ದರು.
ವಿವಿಧ ಕೇತ್ರದ ಸಾಧಕರಾದ ಚಂದ್ರಕಾಂತ ಬಡಿಗೇರ ತಬಲಾ ಕಲೆ (ಹತ್ತರವಾಟ) ರಜಾಕ ಸುತಾರ ಮಾಜಿ ಸೈನಿಕರು (ಧುಳಗನವಾಡಿ) ಮಹಾದೇವಿ ಟಕಳೆ ಸಂಪ್ರದಾಯ ಕಲೆ(ಯಾದಗೂಡ) ತಾತೋಬಾ ಬುಡಕೆ ಸಮುದಾಯ ಸೇವೆ(ಸಂಕಣವಾಡಿ) ಇವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಪೂಜ್ಯರು ಗೌರವಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ತಂಡದವರು ಸಂಗೀತ ಗಾಯನ , ಭಜನಾ ಪದ , ವೀರಗಾಸೆ ಕುಣಿತ, ತತ್ವ ಪದ, ಕರಡಿ ಮಜಲು, ಸಂಪ್ರದಾಯ ಪದ, ಜಾನಪದ ನೃತ್ಯ ಶ್ರೀಕೃಷ್ಣ ಪಾರಿಜಾತ ಕಲಾಪ್ರದರ್ಶನ ನೀಡಿ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಸುಪ್ರೀಯಾ ಕಲಾಚಂದ್ರ ಸ್ವಾಗತಿಸಿದರು.