ಚಿಕ್ಕೋಡಿ :–
ತಾಲೂಕಿನ ಆರೋಗ್ಯಾಧಿಕಾರಿಗಳ ಕಚೇರಿ ಚಿಕ್ಕೋಡಿಯಲ್ಲಿ ಶಿವಯೋಗಿ ಸಿದ್ದರಮೇಶ್ವರ ಜಯಂತಿನ್ನು ಆಚರಿಸಲಾಯಿತು.
ಮಂಗಳವಾರ ದಿನಾಂಕ ೧೪.೦೧.೨೦೨೫ ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಚಿಕ್ಕೋಡಿಯಲ್ಲಿ ಶಿವಯೋಗಿ ಸಿದ್ದರಮೇಶ್ವರ ಭಾವ ಚಿತ್ರಕ್ಕೆ ತಾಲೂಕಾ ಆರೋಗ್ಯಾಧಿಕಾರಿ ಡಾ,ಸುಕುಮಾರ ಭಾಗಾಯಿ ಪೂಜೆ ಸಲ್ಲಿಸಿ.
ಮಾತನಾಡಿ ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬರು. ಇವರ ಜೀವನ ಜರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರಿಯುತ್ತವೆ. ಸೊನ್ನಲಿಗೆ (ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಇವರ ಜನ್ಮಸ್ಥಳ. ತಂದೆ-ಮುದ್ದುಗೌಡ. ತಾಯಿ-ಸುಗ್ಗಲೆ. ಮನೆದೈವ-ಧೂಳಿಮಾಕಾಳ. ರೇವಣಸಿದ್ಧನ ವರದಿಂದ ಹುಟ್ಟಿದ. ತಂದೆ ತಾಯಿ ಇಟ್ಟ ಹೆಸರು ಧೂಳಿಮಾಕಾಳ. ಅನಂತರ ನಾಥಸಿದ್ಧ ಸಂಪ್ರದಾಯದವನಾಗುವಲ್ಲಿ ಸಿದ್ಧರಾಮನೆಂದು ಪ್ರಸಿದ್ಧನಾದ. ಬಾಲ್ಯದಲ್ಲಿ ಮುಗ್ಧಭಕ್ತ.
ಈ ಸಂದರ್ಭದಲ್ಲಿ ಡಾ, ರಾಜಕುಮಾರ ಮನಗುತ್ತಿ, ಡಾ.ಯಶೋಧಾ ಬಬಲಿ ರಾಜು ದತ್ತವಾಡೆ ಸುನೀಲ ಅರಭಾಂವಿ, ಸುನೀಲ ಪೂಜೇರಿ, ಸಾವಿತ್ರಿ ಧಾರವಾಡ, ಸುಮನ ಪೂಜೇರಿ, ಜಯಶೀಲ ಡಿ, ಗಣೇಶ ಕುದನೋರೆ, ಹಾಗೂ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.