ಚಿಕ್ಕೋಡಿ :–
ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಭ್ರಾತೃತ್ವದ ಸಂದೇಶ ಸಾರಿದ ಸಂತ. ಅವರೂಬ್ಬರು ಪರಿಪೂರ್ಣ ವ್ಯಕ್ತಿ . ಯುವಜನರಿಗೆ ಚೇತನ್ಯೆ ಸ್ವರೂಪಿ . ಎಮ್. ಬಿ.ಕೋಳಿ ಅಭಿಪ್ರಾಯ
ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶ ಭಾರತಿಯರಲ್ಲಿ ಎಂದಿಗೂ ನವಚೈತನ್ಯೆ ತುಂಬುವ ಮಾತು ತಮ್ಮ ಬದುಕಿನ ರೀತಿಯಿಂದಲೇ ಯುವಕರ ಪಾಲಿನ ಸ್ಪೂರ್ತಿಯ ಚಲುಮೆಯಾದ ಸ್ವಾಮಿ ವಿವೇಕಾನಂದರು ಎಂದು ಶಿಕ್ಷಕ ಎಮ್.ಬಿ.ಕೋಳಿ ಯುವ ಜನರಿಗೆ ಕರೆ ನೀಡಿದರು
ಅ
ವರು ಕಳೆದ ದಿನಾಂಕ 15 ರಂದು ತಾಲುಕಿನ ಮಾಂಜರಿ ಗ್ರಾಮದ ಶ್ರೀ ಸರ್ವೋದಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಆಡಳಿತ .ಜಿಲ್ಲಾ ಪಂಚಾಯತ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ನೆಹರು ಯುವ ಕೇಂದ್ರ ಬೆಳಗಾವಿ. ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಮಾಂಜರಿ. ಸರ್ವೋದಯ ಶಿಕ್ಷಣ ಸಂಸ್ಥೆ ಮಾಂಜರಿ ಇವರ ಸಹಯೋಗದಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ 163 ನೇ ಜನ್ಮ ದಿನೋತ್ಸವದ ಅಂಗವಾಗಿ ಚಿಕ್ಕೋಡಿ ತಾಲೂಕಾ ಮಟ್ಟದ ಯುವ ಸಪ್ತಾಹ 2024- 25 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ ವಹಿಸಿದ. ಶ್ರೀ ಬಿ.ಬಿ ಸೌದಿ ಮಾತನಾಡಿ ಯುವಜನರು ಸ್ವಾಮಿ ವಿವೇಕಾನಂದರ ಜೀವನ ಆದರ್ಶ್ ತತ್ವಗಳನು ಅನುಪಾಲನೆ ಮಾಡಿ ತಮ್ಮ ಜೀವನದಲ್ಲಿ ಅಳವಡಿಸುವಂತೆ ಯುವಕರಿಗೆ ಹೇಳಿದರು
ಕಾರ್ಯಕ್ರಮದ ವೇಧಿಕೆಮೇಲೆ ಆರ.ಎಸ.ಶಿಂಗೆ. ಎಸ.ಎ.ಗಾವಡೆ ಎಮ್.ನಾಗವೆಣಿ.ಎ.ಎಮ.ತೋರಸೆ.ಎಸ.ಬಿ.ಮಗದುಮ್ಮ ಸೇರಿದತ್ತೆ ಸಂಸ್ಥೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ರಾಘವೇಂದ್ರ ಲಂಬುಗೋಳ ನಿರೂಪಿಸಿ ಸ್ವಾಗತಿಸಿ ವಂಧಿಸಿದರು