ಚಿಕ್ಕೋಡಿ :–
ಇಂದಿನ ಯುವ ಜನರು ಶಿಕ್ಷಣ ಕಲಿಯುವದರ ಜೊತೆಗೆ ಸುಂದರ ಬದುಕು ನಡೆಸಲು 84 ಅರ್ಥ ಪೂರ್ಣ ಮೌಲ್ಯಗಳನ್ನು ತುಂಬಿಕೊಂಡು ಅರ್ಥಪೂರ್ಣವಾಗಿ ಜೀವನ ನಡೆಸಬೇಕೆಂದು ನಿಪ್ಪಾಣಿ ಕ.ಸಾ.ಪ ತಾಲೂಕ ಘಟಕದ ಅಧ್ಯಕ್ಷರಾದ ಈರಣ್ಣಾ ಶಿರಗಾಂವೆ ಯುವಜನತೆಗೆ ಕರೆ ನೀಡಿದರು.
ಅವರು ಕಳೆದ ಶನಿವಾರ 18 ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಸ್ನೇಹಚೇತನ ಕಲಾಪ್ರೇರಣೆ ಸಮುದಾಯ ಸೇವಾ ಬಳಗ, ಬೇಡಕಿಹಾಳ ವ್ಹಿ.ಎಸ್. ಎಮ್ ಜಿ.ಆಯ್.ಬಾಗೇವಾಡಿ ಪಿ.ಯು. ಕಾಲೇಜ ನಿಪ್ಪಾಣಿ ಇವರ ಸಹಯೋಗದಲ್ಲಿ ಸ್ವಾಮಿ ವೀವೇಕಾನಂದ 163ನೇ ಜನ್ಮ ದಿನಾಚರಣೆ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ ಯುವ ಜನರಿಗೆ ಶಕ್ತಿ ತುಂಬಿದ ಸ್ವಾಮಿ ವೀವೇಕಾನಂದ ಆದರ್ಶ ತತ್ವಗಳನ್ನು ಇಂದಿನ ಯುವ ಜನರು ಅಳವಡಿಸಿಕೊಳ್ಳಬೇಕೆಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಅರ್ಜುನ ನಿಡಗುಂದಿ ಇವರು ಮಾತನಾಡಿ ಕಡಿಮೆ ವಯಸ್ಸಿನಲ್ಲಿ ಬದುಕಿದ ಸ್ವಾಮಿ ವಿವೇಕಾನಂದರು ದೇಶ ಕಂಡ ಅಪ್ರತಿಮ ಸಾಧಕರು ಅವರ ಆಸೆಯದಂತೆ ಭವ್ಯ ಭಾರತ ದೇಶ ಯುವ ಜನರ ಮೇಲೆ ನಿಂತಿದೆ ದುಷ್ಟಚಟಗಳಿಗೆ ದಾಸರಾಗದೆ ಕ್ರೀಯಾಶೀಲ ವ್ಯಕ್ತಿತ್ವ ಹೊಂದಿ ಸುಭದ್ರ ನಾಡ ಕಟ್ಟಲು ಮುಂದಾಗಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯರಾದ ಎನ್.ಎಸ್. ಮಾದನ್ನವರ ವಹಿಸಿದ್ದರು. ಸಂಘಟಕ ನಾಗರಾಜ ಮಾಲಗತ್ತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭರತ ಕಲಾಚಂದ್ರ, ಎಸ್. ಎ. ಮುತ್ನಾಳೆ, ಪಿ.ಎ.ಪಾಯಮಲ್ಲೆ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಲಾಯಿತು. ಸುಪ್ರೀಯಾ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಸಮಾಜೆ ಸ್ವಾಗತಿಸಿದರು. ಆಯ್.ವ್ಹಿ.ನಡೋಣಿ ವಂದಿಸಿದರು.