![Screenshot_20250129_144044](https://intelligencertimes.com/wp-content/uploads/2025/01/Screenshot_20250129_144044.jpg)
ಬೆಂಗಳೂರು :–
ಗೀಸರ್‌ನಲ್ಲಿ ಕ್ಯಾಮೆರಾ ಇಟ್ಟು ಮಹಿಳೆಯ ಆಶ್ಲೀಲ ವಿಡಿಯೋ ದಾಖಲಿಸಿದ್ದ ಸುದ್ದಿ ವ್ಯಾಪಕ ವೈರಲ್ ಆಗುತ್ತಲೇ ಈ ಪ್ರಕರಣಕ್ಕೆ ಪೊಲೀಸರ ತನಿಖೆ ಶಾಕಿಂಗ್ ಟ್ರಸ್ಟ್ ನೀಡಿದ್ದು, ಅಕ್ರಮ ಸಂಬಂಧ ಮುಚ್ಚಿ ಹಾಕಲು ಮಹಿಳೆಯೇ ಇಂತಹ ಬೃಹನ್ನಾಟಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು…ಮನೆಗೆ ಅಳವಡಿಸಿದ್ದ ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ದುಷ್ಕರ್ಮಿಯನ್ನು ಸಾರ್ವಜನಿಕರೇ ಪತ್ತೆ ಮಾಡಿ ಥಳಿಸಿದ್ದ ವಿಡಿಯೋ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಆರೋಪಿ ಮತ್ತು ಸಂತ್ರಸ್ಥ ಮಹಿಳೆಯ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಪೊಲೀಸ್ ವಿಚಾರಣೆ ವೇಳೆ
ತಾಂಕಿಂಗ್ ಸತ್ಯಗಳು ಹೊರಬಂದಿವೆ.
ಪೊಲೀಸರ ತಲೆಗೆ ಹುಳ ಬಿಟ್ಟ ‘ಗೀಸರ್ ಕ್ಯಾಮೆರಾ’ ಮತ್ತು ಸಂತ್ರಸ್ಥ ಮಹಿಳೆಯನ್ನು ತಾಣೆಗೆ ಕರೆತಂದ ಪೊಲೀಸರು ಗೀಸರ್ ನಲ್ಲಿ ಹೇಗೆ ಕ್ಯಾಮೆರಾ ಇಡಲು ಸಾಧ್ಯ ಎಂಬುದನ್ನು ಪ್ರಶ್ನಿಸಿದ್ದಾರೆ. ಗೀಸರ್ ಹೀಟ್ ಗೆ ಎಂತಹ ಎಲೆಕ್ಟ್ರಾನಿಕ್ ವಸ್ತುಗಳಾದರು ಮೆಲ್ಟ್ ಆಗುತ್ತದೆ.
ಅಂತಹುದರಲ್ಲಿ ರಹಸ್ಯ ಕ್ಯಾಮೆರಾ ಹೇಗೆ ಕೆಲಸ ಮಾಡಿತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸರ ತಲೆ ತಿರುಗುವ ಶಾಂಕಿಂಗ್ ಸತ್ಯಗಳು ಆರೋಪಿಗಳಿಂದ ಹೊರಬಿದ್ದಿದೆ.
ಪೊಲೀಸರ ತನಿಖೆ ಮುಂದುವರೆದಂತೆ, ಪೊಲೀಸರಿಗೆ ಆರೋಪಿ ಪುರುಷ ಮತ್ತು ಸಂತ್ರಸ್ಥ ಮಹಿಳೆ ನಡುವಿನ ಅಕ್ರಮ ಸಂಬಂಧದ ವಾಸನೆ ಬಡಿದಿದೆ. ಈ ವೇಳೆ ಪೊಲೀಸರು ಇಬ್ಬರನ್ನೂ ಪ್ರತ್ಯೇಕಿಸಿ ವಿಚಾರಣೆ ನಡೆಸಿದ್ದು,
ಸಂತ್ರಸ್ಥೆಯ ವಿಚಾರಣೆಗೆ ಮಹಿಳಾ ಅಧಿಕಾರಿಯನ್ನು ನೇಮಿಸಿದ್ದಾರೆ. ಈ ವೇಳೆ ಸಂತ್ರಸ್ಥೆ ಎನ್ನಲಾದ ಆಘಾತಕಾರಿ ಮಾಹಿತಿಗಳನ್ನು ಹೊರ ಹಾಕಿದ್ದಾರೆ. ಮಹಿಳೆ
ಮಹಿಳೆಯನ್ನು ವಿಚಾರಣೆ ನಡೆಸಿದ ಮಹಿಳಾ ಅಧಿಕಾರಿ ತನಿಖೆಯ ಪ್ರಕಾರ, ಆರೋಪಿ ಪುರುಷನೊಂದಿಗೆ ಈ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಆಕೆಯೇ ತನ್ನ ನಗ್ನ ಚಿತ್ರಗಳ ಸೆಲ್ಪಿ ತೆಗೆದುಕೊಂಡು ಆತನ ಮೊಬೈಲ್ ಗೆ ಕಳುಹಿಸಿದ್ದಳು.
ಆದರೆ ಈ ವಿಚಾರ ಮನೆಯವರಿಗೆ ತಿಳಿದಾಗ ಏನು ಮಾಡಬೇಕು ಎಂದು ತೋಚದೇ ಗೀಸರ್ ಕ್ಯಾಮೆರಾ ನಾಟಕವಾಡಿದ್ದಾಳೆ, ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಆರೋಪಿತ ವ್ಯಕ್ತಿ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಹೇಳಿದ್ದಾಳೆ. ಇದು ಹೈಡ್ರಾಮಾಕ್ಕೆ ಕಾರಣವಾಯಿತು. ತನ್ನ ತಪ್ಪು ಮುಚ್ಚಿಕೊಳ್ಳಲು ಮಹಿಳೆ ಗೀಸರ್ ಕ್ಯಾಮೆರಾ ನಾಟಕ ಮಾಡಿದ್ದಾಳೆ ಎಂದು
ಪೊಲೀಸ್ ಮೂಲಗಳು ಹೇಳಿವೆ.
ಇನ್ನು ಈ ಪ್ರಕರಣ ಇತ್ಯರ್ಥವಾದ ಬೆನ್ನಲ್ಲೇ ಮಹಿಳೆ ದೂರು ನೀಡಲು ನಿರಾಕರಿಸಿದ್ದು, ಆರೋಪಿ ಪುರುಷ ಕೂಡ ತನ್ನ ನಡೆದ ಹಲ್ಲೆ ಹೊರತಾಗಿಯೂ ಯಾರ ಮೇಲೂ ದೂರು ನೀಡಲು ನಿರಾಕರಿಸಿದ್ದಾನೆ. ಅಲ್ಲದೆ ಯಾರ ವಿರುದ್ಧ ದೂರು ದಾಖಲಿಸದಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಬಳಿಕ ಮಧ್ಯರಾತ್ರಿ ಆರೋಪಿ ಪುರುಷ ಮತ್ತು ಮಹಿಳೆಯನ್ನು ಪೊಲೀಸರು ಠಾಣೆಯಿಂದ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇದೊಂದು “ಹತೋಟಿ ಮೀರಿದ ಸಂಬಂಧ” ಆರಂಭದಲ್ಲಿ ಗಂಭೀರವಾದ ಬ್ಯಾಕ್ ಮೇಲ್ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ ಬಳಿಕ ತನಿಖೆಯಿಂದ ಇದು ವೈಯಕ್ತಿಕ ವಿವಾದ ಎಂದು ತಿಳಿಯಿತು ಎಂದು ಹೇಳಿದ್ದಾರೆ.