ಚಿಕ್ಕೋಡಿ :–
ಸ್ಥಳೀಯ ಚಿದಾನಂದ ಬಸಪ್ರಭು ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಸ್ಥಳೀಯ ವಿವಿಧ ಸಂಘ, ಸಂಸ್ಥೆ ಹಾಗೂ ಸರಕಾರಿ ಇಲಾಖೆಗಳ ಆಶ್ರಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಜರಗಿತು. ಇದರ ಉದ್ಘಾಟಕರಾಗಿ ಆಗಮಿಸಿದ
ಗೌರವಾನ್ವಿತ ಪ್ರಧಾನ ಹಿರಿಯ ನ್ಯಾಯಾಧೀಶರಾದ ಶ್ರೀ. ಹರೀಶ ರಂಗನಗೌಡ ಪಾಟೀಲ ರವರು ಮಾತನಾಡುತ್ತಾ ಬಾಲಕಾರ್ಮಿಕ ಹೋಗಲಾಡಿಸಿದರೆ ಮಾತ್ರ ದೇಶ ಮುಂದುವರೆಯಲು ಸಾಧ್ಯ, ಇಂತಹ ಘಟನೆಗಳೇನಾದರೂ ತಮ್ಮ ಸುತ್ತ ಮುತ್ತಲು ನಡೆದಿದ್ದರೆ ಮೇಲಾಧಿಕಾರಿಗಳಿಗೆ ತೀರಿಸಲು ಕರೆ ನೀಡಿದರು.
ನ್ಯಾಯವಾದಿ ಸಂಘ ಅಧ್ಯಕ್ಷರಾದ ಶ್ರೀ ಕಲ್ಮೇಶ್ ಟಿ ಕಿವುಡ್ ಸಭೆ ಉದ್ದೇಶಿಸಿ ಮಾತನಾಡುತ್ತಾ ಬಾಲಕಾರ್ಮಿಕರ ಜೊತೆಗೆ ಇನ್ನೂ ಹಲವಾರು ಸಾಮಾಜಿಕ ಪಿಡುಗುಗಳು ಪ್ರಚಲಿತ ಇದ್ದು ಇವುಗಳನ್ನು ಹೋಗಲಾಡಿಸಿ ಜಗತ್ತಿನಲ್ಲಿ ಅತಿ ಹೆಚ್ಚು ಯುವಕರಿಂದ ಕೂಡಿದ ನಮ್ಮ ದೇಶ ಮುಂದುವರೆಯಲು ಸಾಧ್ಯ ಎಂದರು.
ಅತಿಥಿಗಳಾಗಿ ಆಗಮಿಸಿದ ಕುಮಾರಿ ಜ್ಯೋತಿ ಕಾಂತೆ ಯೋಜನಾ ನಿರ್ದೇಶಕರು ಮಾತನಾಡುತ್ತಾ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ವಿವರಿಸಿತ್ತ ಅವುಗಳ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು ಅಲ್ಲದೆ ಏನಾದರೂ ನ್ಯೂನ್ಯತೆಗಳು ಕಂಡಲ್ಲಿ ಸಹಾಯವಾಣಿಗಳ ಮೂಲಕ ಮೇಲಾಧಿಕಾರಿಗಳಿಗೆ ತಿಳಿಸಲು ಹೇಳಿದರು.
ಮಾರಂಭದ ಅಧ್ಯಕ್ಷರಾದ ಬಹುತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ದರ್ಶನಕುಮಾರ್ ಬಿಳ್ಳೂರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಬಾಲಕಾರ್ಮಿಕರಾಗದೆ ಅಲ್ಪಾವಧಿ ವೃತ್ತಿಪರ ತರಬೇತಿ ಪಡೆದುಕೊಂಡು ಕೌಶ್ಯಲ್ಯ ಅಭಿವೃದ್ಧಿಗೊಳಿಸಿ ಉದ್ಯಮಶೀಲತೆ ಹೊಂದಲು ಕರೆ ನೀಡಿದರು. ಉಪನ್ಯಾಸಕರಾದ ಎಂ. ಬಿ. ನಾವಿರವರು ಸ್ವಾಗತಿಸಿದರು ಹಾಗೂ ಸ್ವಾತಿ ಕಬನೂರೆ ನಿರೂಪಿಸಿದರು.