ಚಿಕ್ಕೋಡಿ :–
ಕ್ಷಯರೋಗ ಜಾಗೃತಿ ರ‍್ಯಾಲಿ
೧೦೦ ದಿನಗಳ ತೀವ್ರ ಕ್ಷಯರೋಗ (ಟಿಬಿ) ಅಭಿಯಾನದ ಭಾಗವಾಗಿ, ಆಯುಷ್ಯ ಇಲಾಖೆಯು ರಾಜ್ಯ ಟಿಬಿ ಸೆಲ್‌ನ ಸಹಯೋಗದೊಂದಿಗೆ ೨೦೨೫ ರ ವೇಳೆಗೆ ಟಿಬಿಯನ್ನು ತೊಡೆದುಹಾಕುವ ಧ್ಯೇಯದೊಂದಿಗೆ ಟಿಬಿ ತಡೆಗಟ್ಟುವಿಕೆ, ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಜನಜಾಗೃತಿ ರ‍್ಯಾಲಿ ಅವಶ್ಯಕ ಎಂದು ಚಿಕ್ಕೋಡಿಯ ತಾಲೂಕು ವೈದ್ಯಾಧಿಕಾರಿ ಡಾ. ಸುಕುಮಾರ ಬಾಗಾಯಿ ಹೇಳಿದರು.
ಅವರು ಇಂದು ಪಟ್ಟಣದ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಕೆ ಎಲ್ ಇ ನರ್ಸಿಂಗ ಕಾಲೇಜು, ತಾಲೂಕು ವೈದ್ಯಾಧಿಕಾರಿಗಳ ಕಛೇರಿ, ಪುರಸಭೆ ಚಿಕ್ಕೋಡಿ, ಕೆ.ಎಸ್.ಅರ್.ಟಿ.ಸಿ ಚಿಕ್ಕೋಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಷಯರೋಗ ಜನಜಾಗೃತಿಗೆ ಚಾಲನೆ ನೀಡಿ ಮಾತನಾಡುತ್ತಾ
ಆರಂಭಿಕ ಪತ್ತೆ ಮತ್ತು ಟಿಬಿ ಚಿಕಿತ್ಸಾ ಪ್ರೋಟೋಕಾಲ್‌ಗಳ ಕಟ್ಟುನಿಟ್ಟಾದ ಅನುಸರಣೆಯಿಂದ ಕ್ಷಯಮುಕ್ತ ಭಾರತವನ್ನು ಹೊಂದಬಹುದು ಎಂದು ಹೇಳಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿ ಮಾತನಾಡುತ್ತಾ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದಕ್ಕೆ ಸಂಬಂಧಿಸಿದ ಕಳಂಕವನ್ನು ನಿವಾರಿಸಲು ಸರ್ಕಾರ, ಆರೋಗ್ಯ ಕಾರ್ಯಕರ್ತರು ಮತ್ತು ಸಮುದಾಯ ಇವುಗಳ ಸಾಮೂಹಿಕ ಪ್ರಯತ್ನಗಳೊಂದಿಗೆ ನಾವು ಟಿಬಿ-ಮುಕ್ತ ವನ್ನಾಗಿಸಬಹುದು ಎಂದು ಹೇಳಿದ್ದಾರೆ.
ಜಾಗೃತಿ ರ್ಯಾಲಿ: ಇದೇ ಸಮಯದಲ್ಲಿ ವಿದ್ಯಾರ್ಥಿಗಳು ಟಿಬಿ ರೋಗಲಕ್ಷಣಗಳು, ಆಹಾರ ಪೋಷಣೆ, ಸರಕಾರಿ ಸೌಲಭ್ಯಗಳ, ಮೂಡನಂಬಿಕೆ ಇನ್ನೀತರ ಕರಪತ್ರಗಳನ್ನು ವಿತರಿಸಿದರು, ಕ್ಷಯ ಮತ್ತು ಅದರ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲು ಘೋಷಣೆಗಳನ್ನು ಕೂಗುತ್ತಾ ಚಿಕ್ಕೋಡಿ ನಗರದ ಅಂಕಲಿ ಖೂಟದಿಂದ ಪ್ರಾರಂಭಿಸಿ ಕೆ ಸಿ ರೋಡ ಮುಖಾಂತರ ಕೇಂದ್ರ ಬಸನಿಲ್ದಾಣದವರೆಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಮುಖ್ಯಸ್ಥರಾದ ಶ್ರೀ ಶಶಿಧರ್, ಕಾರ್ಮಿಕ ಅಧಿಕಾರಿ ಶ್ರೀ ಎನ್ ಎಸ್ ಮಂಗಸೂಳಿ ಡಾ. ಬಾಹುಬಲಿ ಮಹಾಜನ, ಕಾಶಪ್ಪನವರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಂತೋಷ ಶಿವಣ್ಣನವರ್ ಸ್ವಾಗತಿಸಿ ನಿರೂಪಿಸಿದರು. ಮಹಾಂತೇಶ ಗುಡ್ನವರ ವಂದಿಸಿದರು. ಕೆ ಎಲ್ ಇ ಯ ಆಯುರ್ವೇದ ಹಾಗೂ ಕೆ ಎಲ್ ಇ ನರ್ಸಿಂಗ ಕಾಲೇಜಿನ ಉಪನ್ಯಾಸಕರು, ವೈದ್ಯರು, ಹಾಗೂ ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ರ‍್ಯಾಲಿಯÀಲ್ಲಿ ಪಾಲ್ಗೊಂಡಿದ್ದರು.