ಚಿಕ್ಕೋಡಿ :–
ಮಹಾರಾಷ್ಟ್ರ ರಾಜ್ಯದ ಶಿರಡಿಯಲ್ಲಿ ಸಹಕಾರಿ ಸೊಸೈಟಿಯ ಫೆಡರೇಶನ್ ವತಿಯಿಂದ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಭಾಗವಹಿಸಿದರು.
ಅಂತಾರಾಷ್ಟ್ರೀಯ ಸಹಕಾರ ಚಳುವಳಿಯ ಯಶಸ್ಸನ್ನು ಆಚರಿಸಲು ಈ ಸಮ್ಮೇಳನ ಆಯೋಜಿಸಿದ್ದಾರೆ. ಈ ಸಮ್ಮೇಳನದಲ್ಲಿ ನೇಪಾಳ,ಶ್ರೀಲಂಕಾ ಫಿಲಿಫೈನ್ಸ್, ಥೈಲ್ಯಾಂಡ, ಮಾರಿಸಸ್, ಹಾಗೂ ವಿವಿಧ ದೇಶದ ಪ್ರತಿನಿಧಿಗಳು ಹಾಜರಿದ್ದರು.
ಇದೇ ವೇಳೆ ಮಹಾರಾಷ್ಟ್ರ ಕೋ ಆಪರೇಟೀವ ಫೆಡರೇಷನ್ ಅಧ್ಯಕ್ಷರಾದ ಶ್ರೀ ಕಾಕಾ ಕೋಯ್ಯತೆಜಿ ನಮ್ಮನ್ನು ಸ್ವಾಗತಿಸಿ,ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಉದಯ ಜೋಶಿ ಜಿ,ಸಹಕಾರ ಭಾರತಿ ಎಲ್ಲ ರಾಜ್ಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.