ಚಿಕ್ಕೋಡಿ :–
ಮನುಷ್ಯಜೀವಿ ಹುಟ್ಟಿ ಬಂದದ್ದು ಈ ಬದುಕನ್ನು ಮುಗಸಿ ಮತ್ತೆ ಈ ಜೀವ ಪಂಚಭೂತಗಳಲ್ಲಿ ಲೀನವಾಗಿ ಹೋಗುವುದು ಜೀವನ ಸಾರ್ಥಕತೆಗೆ ನಿನ್ನೋಳಗೊಂದು ಜ್ಞಾನವೆಂಬ ರತ್ನವಿದೆ ಅದನ್ನು ಸನ್ಮಾರ್ಗಕ್ಕೆ ಬಳಸಿ ಪರರಿಗೆ ಹಿತ ಬಯಸಿ ಎಂದು ನೀಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸದ್ಭಕ್ತರಿಗೆ ಹೀತೋಪದೇಶ ನೀಡಿದರು
ಅವರು ಕಳೆದ ಶನಿವಾರ 11 ರಂದು ಚಿಕ್ಕೋಡಿ ಸಮೀಪದ ಧುಳಗನವಾಡಿಯ ಬ್ರಹ್ಮದೇವ ಮಂದಿರ ವೇದಿಕೆಯಲ್ಲಿ ಜರುಗಿದು ವಿಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳ ಎರಡನೇಯ ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪುಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿನಡೆ ಒಂದಾಗಿದ್ದು ಅವಾಗ ಅವರು ನಡೆದಾಡುವ ದೇವರು ಎನಿಸಿಕೊಂಡವರು ಅವರ ಸರಳ ಸನ್ಮಾರ್ಗ ನಮ್ಮೆಲ್ಲರ ದಾರಿ ದೀಪವಿದ್ದಂತೆ.
ಅಥಿತಿಗಳಾಗಿ ಶರಣ ವಿರೇಶ ಪಾಟೀಲ ಅವರು ಮಾತನಾಡಿ ಪ್ರತಿಯೊಬ್ಬರ ಮನಸ್ಸು ಅಂತಕರಣ ಶುದ್ದಿಯಾಗಿರಬೇಕು ನಾನುಎಂಬುವದು ದ್ವೇಷ ಸುಟ್ಟುಹಾಕಿ ಸತ್ಯ ಶುದ್ದ ಕಾಯಕದಿಂದ ಬದುಕಬೇಕು ಸಿದ್ದೇಶ್ವರ ಮಹಾಸ್ವಾಮಿಗಳು “ ಸತ್ಯಂ ಶಿವಂ ಸುದರಂ “ ಎಂಬ ಉಕ್ತಿಯಂತೆ ಮನುಷ್ಯನ ನೆತ್ತಿಹಸುವಿಗೆ ಜ್ಞಾನಅಮೃತ ಬೋದನೆಮಾಡಿ ಅಧ್ಯತ್ಮೀಕದ ದಿವ್ಯ ಸಂಜೀವಿನಿ ನೀಡಿದವರು ಎಂದು ಬಣ್ಣಿಸಿದರು.
ವೇದಿಕೆ ಮೇಲೆ ಚನ್ನಮಲ್ಲಯ್ಯಾ ಮಠಪತಿ , ಮಿಥುನ ಅಂಕಲೆ ಉಪಸ್ಥಿತಿರಿದ್ದರು ಆರಂಭದಲ್ಲಿ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿಲಾಯಿತು. ಸುಪ್ರೀಯಾ ಸುಜಾತಾ ಸಿದ್ದೇಶ್ವರ ಭಕ್ತಿಗೀತೆ ಪ್ರಸ್ತುತ ಪಡಿಸಿದರು. ರವೀಂದ್ರ ಗು ಕಮತೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಾಧಕ ಮಹಣೀಯರಿಗೆ ಸನ್ಮಾನ
ಚಿಕ್ಕೋಡಿ: ಆಶಾದೀಪ ಸಮುದಾಯ ಕಲಾಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಇತ್ತೀಚಿಗೆ ಜರುಗಿದ ಕರುನಾಡ ಕಲಾಸೌರಭ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಮಹಣಿಯರು ಚಂದ್ರಕಾಂತ ಬಡಿಗೇರ ತಬಲಾ ಕಲೆ (ಹತ್ತರವಾಟ) ರಜಾಕ ಸುತಾರ ಮಾಜಿ ಸೈನಿಕರು (ಧುಳಗನವಾಡಿ) ಮಹಾದೇವಿ ಟಕಳೆ ಸಂಪ್ರದಾಯ ಕಲೆ(ಯಾದಗೂಡ) ತಾತೋಬಾ ಬುಡಕೆ ಸಮುದಾಯ ಸೇವೆ(ಸಂಕಣವಾಡಿ) ಇವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಪೂಜ್ಯರು ಗೌರವಿಸಿದರು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಸಿದ್ದನಗೌಡಾ ಪಾಟೀಲ ಕೇರೂರದ ಜೋತಿರ್ಲಿಂಗ ಶರಣರು ವಾಳಕಿಯ ಶಿವಶಕ್ತಿ ಸಿದ್ದಾಶ್ರಮದ ಕುಮಾರ ಶರಣರು ಅಶೋಕ ಚೌಗಲೆ ರಮೇಶ ಖೋತ ಹಾಗೂ ಸುಪ್ರೀಯಾ ಕಲಾಚಂದ್ರ ಉಪಸ್ಥಿತರಿದ್ದರು.