ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಸುರಕ್ಷಾ ಭೀಮಾ ಯೋಜನೆ ಜಾಗೃತಿ ಜಾಥಾ ಕಾರ್ಯಕ್ರಮ

ಚಿಕ್ಕೋಡಿ  :–

 ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯು ವಾರ್ಷಿಕ ಪ್ರೀಮಿಯಂ ಪಾವತಿ 436 ರೂ ತುಂಬಿದರೆ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ವಾರ್ಷಿಕ ಪ್ರೀಮಿಯಂ ಪಾವತಿ 20 ರೂ ತುಂಬಿದರೆ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್ ಎಸ್ ಕಾದ್ರೋಳಿ ಹೇಳಿದ್ದರು

ಮಂಗಳವಾರ  ತಾಲೂಕ ಪಂಚಾಯತ ಆವರಣದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಯಾವುದೇ ಕಾರಣದಿಂದ ಮರಣ ಹೊಂದಿದರೆ ಜೀವ ವಿಮಾ ರಕ್ಷಣೆಯಾಗಿದೆ ಇದು ಒಂದು ವರ್ಷದ  ವಿಮಾ ಆಗಿದ್ದು ಇದನ್ನು ವರ್ಷದಿಂದ ವರ್ಷಕ್ಕೆ ನವಿಕರಿಸಬಹುದಾಗಿದೆ. 18 ರಿಂದ 50 ವರ್ಷ ವಯಸ್ಸಿನವರು ವಿಮಾ ರಕ್ಷಣೆಯನ್ನು ಮಾಡಬಹುದು ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಅಪಘಾತವಾಗಿ ಮರಣ ಅಥವಾ ಅಂಗವೈಕಲ್ಯಕ್ಕೆ ರಕ್ಷಣೆಯನ್ನು ನಿಡುತ್ತದೆ ಎಂದು ಹೇಳಿದ್ರು

ಈ ಸಂದರ್ಭದಲ್ಲಿ ಸಹಾಯಕ ನಿರ್ಧೇಶಕರಾದ ಎಸ್ ಎಸ್ ಮಠದ ಶಿವಾನಂಧ ಶಿರಗಾಂವೆ, ಸಹಾಯಕ ಲೆಕ್ಕಾಧಿಕಾರಿಯಾದ ರಾಜೇಂದ್ರ ಮೈಗೂರ ಸಿಡಿಪಿಓ ಸಂತೋಷ ಕಾಂಬಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕರಾದ ಅರ್ಚನಾ ಸಾನೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಎ ಮೇಕನಮರಡಿ ಅನುಷ್ಠಾನ  ಇಲಾಖೆಯ ಅಧಿಕಾರಿಗಳು, ತಾಲೂಕ ಪಂಚಾಯತ ಐ.ಇ.ಸಿ ಸಂಯೋಜಕರ ರಂಜೀತ ಕಾರ್ಣಿಕ,  ಎಮ. ಐ. ಎಸ ಸಂಯೋಜಕ  ಚೇತನ ಶಿರಹಟ್ಟಿ  ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ , ಸಂಜೀವಿನಿ ಯೋಜನೆ ಬಸುರಾಜ ಡಿ  ಅಂಗನವಾಡಿ ಕಾರ್ಯಕರ್ತರು, ನರೇಗಾ ಸಿಬ್ಬಂದಿಗಳು  ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *