ಚಿಕ್ಕೋಡಿ :–
ಕನ್ನಡ ಭಾಷೆಗೆ ಎರಡೂ ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ಅಂತಹ ಕನ್ನಡ ನಾಡಿಗೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡ ನಾಡಿಗೆ ಕಳಶ ಪ್ರಾಯವಾಗಿದೆ. ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ನೆಲ, ಜಲ ಉಳಿಸಲು ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕೆಂದು ಕೆ.ಎಲ್.ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ಅಭಿವ್ಯಕ್ತ ಪಡಿಸಿದರು.
ಅವರು ಕಳೆದ ಶನಿವಾರ 21 ರಂದು ಕಾಲೇಜಿನ ಹೊರಾಂಗಣ ವೇದಿಕೆಯಲ್ಲಿ ಕನ್ನಡ ಬಳಗದಿಂದ ಆಯೋಜಿಸಿದ ಕನ್ನಡ ಹಬ್ಬ “ಐಸಿರಿ-2025” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಾವಿರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಭರತ ಕಲಾಚಂದ್ರ ಇವರು ಆರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಐಸಿರಿ-2025 ವಿಶೇಷ ನಾಮಫಲಕ ಅನಾವರಣಮಾಡಿ ಮಾತನಾಡಿ, ನಮ್ಮ ಬದುಕು ಕಟ್ಟಿ ಕೊಳ್ಳಲು ಶಿಕ್ಷಣದಲ್ಲಿ ಹತ್ತು ಹಲವಾರು ಭಾಷೆಗಳನ್ನು ಕಲಿತು ಭಾಷೆ ಶ್ರೀಮಂತಿಕೆ ಹೆಚ್ಚಿಸಬಹುದು.
ಆದರೆ, ಜನ್ಮ ಕೊಟ್ಟ ನಮ್ಮ ನಾಡಿನ ನೆಲದ ಋಣ ತಿರಿಸಲು ಸಂತರಶಳದಿಂದ ಕರುನಾಡ ಬಾಷೆಯನ್ನು ಪೋಷಿಸಿ ಬೆಳೆಸಬೇಕೆಂದರು. ಹಾಗೇನೆ ನಮ್ಮ ನಾಡಿನ ಸಾಂಸ್ಕೃತಿಕ ಕಲೆ ಸ್ವಚ್ಛಂದವಾಗಿ ಆಸ್ವಾಧಿಸಬೇಕು. ಅಶ್ಲೀಲ್ ಹಾಡುಗಳನ್ನು ದೂರಮಾಡಿ ನೈಜ ಮೂಲ ಜನಪದ ಕಲೆ ಉಳಿಸಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಂಗವಾಗಿ ಕನ್ನಡ ನಾಡು ಸಂಸ್ಕೃತಿ ಬಿಂಬಿಸುವ ರಸಪ್ರಶ್ನೆ, ಗಾಯನ, ಭಾಷಣ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಪ್ರಮಾಣಪತ್ರ ಮೆಡಲ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕಾರದ ಡಾ. ಕುಮಾರ ಚೌಗಲಾ, ಡಾ. ಸಂಜಯ ಪೂಜೇರಿ, ಡಾ. ಮಹಾಂತಯ್ಯ ಮಠಪತಿ, ಡಾ. ಸಂಜಯ ಅಂಕಲಿ, ಸಂಗೀತಾ ವಾಟೆಗಾಂವಕರ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು. ಆಶಾದೀಪ ಕಲಾಕೇಂದ್ರದ ಕಲಾವಿದರು ಕನ್ನಡಪರ ಗೀತಗಾಯನ ಪ್ರಸ್ತುತ ಪಡಿಸಿದರು.
ಡಾ. ಸಚೀನ ಮೆಕ್ಕಳಕಿ ಅತಿಥಿ ಪರಿಚಯ ಮಾಡಿದರು. ಸಂಜನಾ ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ಬಾಹುಬಲಿ ಅಕ್ಕಿವಾಟೆ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸ್ನೇಹಾ ಶಿರಹಟ್ಟಿ ವಂದಿಸಿದರು. ನಂತರ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಮಜರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.