ಚಿಕ್ಕೋಡಿ :–
ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಚಿಕ್ಕೋಡಿ ವತಿಯಿಂದ ಮಹಿಳೆಯರು ಆರ್ಥಿಕತೆ ಲಾಭ ಪಡೆದುಕೊಂಡು ಸ್ವಾವಲಂಬನೆ ಬದಕು ಕಟ್ಟಿಕೊಳ್ಳುವಂತೆ ಫಾದರ ಪೀಟರ ಹೇಳಿದರು.
ಪಟ್ಟಣದಲ್ಲಿರುವ ಸಾಯಿಮಂದಿರ ಬಳಿ ಇರುವ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಕಚೇರಿಯಲ್ಲಿ ಪ್ರವಾಹ ಪೀಡಿತ ಮಹಿಳೆಯರಿಗೆ ಕೀಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಕಳೆದ 20 ವರ್ಷಗಳಿಂದ ಸಮಾಜದ ಕಟ್ಟ ಕಡೆಯ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದನೆ ಮಾಡುವ ಕಾರ್ಯ ಮಾಡುತ್ತಿದೆ ಎಂದರು.
ಪ್ರವಾಹ ಪೀಡಿತ ಮಹಿಳೆಯರಿಗೆ ಒಟ್ಟು 300 ಕೀಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ.ಗುಂಜ ಸಂಸ್ಥೆಯವರು ಪ್ರವಾಹ ಪೀಡಿತರಿಗೆ ಕೀಟ್ಟ್ ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ಕಾರ್ಯ ಮಾಡಿದೆ ಎಂದರು.
ಬಿಡಿಎಸ್ ಎಸ್ ಎಸ್ ಸಂಸ್ಥೆ ಸಂಯೋಜಕರಾದ ಸಿಸ್ಟರ ಮೇರಿ ಮಾತನಾಡಿ,ಬಿಡಿಎಸ್ ಸಂಸ್ಥೆ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕವಾದ ಯೋಜನೆಗಳನ್ನು ನೀಡುವ ಕಾರ್ಯ ಮಾಡುತ್ತಿದೆ.ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಇಲ್ಲಿನ ಮಹಿಳೆಯತು ಸಾಧಿಸಿ ತೋರಿಸಿದ್ದಾರೆ ಎಂದರು.ಕಲ್ಲೋಳ ಗ್ರಾಮದ ಪ್ರವಾಹ ಪೀಡಿತ ಮಹಿಳೆಯರಿಗೆ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆಯಿಂದ ಮನೆಗಳನ್ನು ನಿರ್ಮಿಸಿಕೊಟ್ಟು ಮಹಿಳೆಯರ ಬದಕು ಕಟ್ಟಿಕೊಡುವ ಕಾರ್ಯ ಮಾಡುತ್ತಿದೆ ಎಂದರು.
ತಾಲೂಕ ಪಂಚಾಯತ ನರೇಗಾ ಯೋಜನೆಯ ಐಇಸಿ ಸಂಯೋಜಕ ರಂಜೀತ ಕಾರ್ಣಿಕ ಮಾತನಾಡಿ,ಸರಕಾರ ಮಾಡದೆ ಇರುವ ಕಾರ್ಯವನ್ನು ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಮಾಡುತ್ತಿದೆ.ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ನರೇಗಾದದಡಿಯಲ್ಲಿ ಉದ್ಯೋಗ ನೀಡಲಾಗುತ್ತಿದೆ ಎಂದರು.ಮಹಿಳೆಯರ ಆರ್ಥಿಕಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಜೀವ ಕಾಂಬಳೆ,ಸುನೀಲ ಗಸ್ತಿ,ರಾಜೇಂದ್ರ ಚಿಕ್ಕೋಡಿ,ಸಿದ್ದಪ್ಪಾ ಪೂಜಾರಿ,ಶೋಭಾ ಕಟ್ಟಿ ಉಪಸ್ಥಿತರಿದ್ದರು.ಗೀತಾ ಗಸ್ತಿ ನಿರೂಪಿಸಿದರು.ಅನೀತಾ ವಾಡಿಕರ ವಂದಿಸಿದರು.ಸಾರಿಕಾ ಕೋಳಿ ಸ್ವಾಗತಿಸಿದರು.
ಚಿಕ್ಕೋಡಿ ಸಾಯಿಮಂದಿರ ಬಳಿ ಇರುವ ಬಿಡಿಎಸ್ ಸಂಸ್ಥೆ ವತಿಯಿಂದ ಪ್ರವಾಹ ಪೀಡಿತ ಮಹಿಳೆಯರಿಗೆ ಗುಂಜ ಸಂಸ್ಥೆಯಿಂದ ಕೀಟ್ ವಿತರಣೆಯನ್ನು ಬಿಡಿಎಸ್ಎಸ್ಎಸ್ ಸಂಸ್ಥೆ ಫಾದರ ಪೀಟರ ಅವರು ವಿತರಣೆ ಮಾಡಿದರು.





