ಹುಬ್ಬಳ್ಳಿ :–
ಶಾಸಕ ಯತ್ನಾಳ್ ಉಚ್ಚಾಟನೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಜಾಣ್ಮೆಯ ನಡೆ ಕೈಗೊಂಡಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಏನೇನು ನಡೆಯುತ್ತಿದೆ ನಡೆಯಲಿ. ನಾವು ಶಿಸ್ತಿನಿಂದ ಹೋಗಬೇಕಾಗುತ್ತದೆ. ವರಿಷ್ಠರು ಎಲ್ಲವನ್ನೂ ನೋಡಿಕೊಂಡು ತೀರ್ಮಾನ ತೆಗೆದುಕೊಂಡಿರುತ್ತಾರೆ.
ಪಕ್ಷದಲ್ಲಿ ಒಗ್ಗಟ್ಟಾಗಿ ಹೋಗಬೇಕೆನ್ನುವುದು ನಮ್ಮ ವಿಚಾರ. ಯತ್ನಾಳ್ ಉಚ್ಚಾಟನೆ ವಿಷಯದಲ್ಲಿ ಹೆಚ್ಚು ಮಾತನಾಡಲ್ಲ. ಸೋಮಶೇಖರ್, ಹೆಬ್ಬಾರಗೆ ನೋಟಿಸ್ ಕೊಟ್ಟಿದ್ದಾರೆ. ವರಿಷ್ಠರು ಸಮಯ ಬಂದಾಗ ಖಂಡಿತ ಕ್ರಮ ಕೈಗೊಳ್ಳುತ್ತಾರೆ. ಹೈಕಮಾಂಡ್ ಜಾಣತನದಿಂದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.