ಬೆಳಗಾವಿ :–
ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಯತ್ನಾಳ್ ನಾಲಿಗೆ ಮತ್ತು ತಲೆಗೆ ಸಂಪರ್ಕ ತಪ್ಪಿದೆ ಎಂದು ಹೇಳಿದ್ದಾರೆ.
ಬಿಜೆಪಿ ಕಾಂಗ್ರೆಸ್ ನಡುವೆ ಹೊಂದಾಣಿಕೆ ಇದೆ.
ಎಂಬ ಯತ್ನಾಳ್ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ನಾಲಿಗೆ ಹರಿಬಿಟ್ಟಿದಕ್ಕೆ ಬಿಜೆಪಿಯಲ್ಲಿ ಯತ್ನಾಳರನ್ನ ಉಚ್ಛಾಟನೆ ಮಾಡಿದ್ದಾರೆ.
ನಮ್ಮ ಸಮಾಜದವರು ಅಂತಾ ನಾವು ನಮ್ಮ ಚೌಕಟ್ಟಿನಲ್ಲಿ ಅವರಿಗೆ ಗೌರವ ಕೊಡ್ತೀವಿ. ಆದರೆ, ಯತ್ನಾಳ್ ಮಾತನಾಡೋ ರೀತಿ ನೋಡಿದ್ರೆ ಅವರ ನಾಲಿಗೆಗೆ ತಲೆಗೆ ಸಂಪರ್ಕ ತಪ್ಪಿದೆ ಎಂದೆನಿಸುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.