ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಡಾ.ಪುನೀತ ರಾಜಕುಮಾರ ಅವರ ೫೦ನೇ ಹುಟ್ಟು ಹಬ್ಬ ಆಚರಣೆ

ಚಿಕ್ಕೋಡಿ :– ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಡಾ.ಪುನೀತ ರಾಜಕುಮಾರ ಅವರ ೫೦ನೇ ಹುಟ್ಟು ಹಬ್ಬವನ್ನು ಪಟ್ಟಣದಲ್ಲಿ ರುವ ಅವರ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ವಿಶೇಷವಾಗಿ ಪೂಜೆ ಮಾಡಿ ನಂತರ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಾಲು ಹಣ್ಣು ಹಂಪಲು ಮತ್ತು ಸಿಹಿ ನೀಡಿ ವಿಭೃಂಜನೆಯಿಂದ ಡಾ.ಪುನೀತ ರಾಜಕುಮಾರ ಅವರ ೫೦ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ ಡಾ.ಪುನೀತ ರಾಜಕುಮಾರ ಅವರು ಕನ್ನಡ […]
ಇ.ಸ್ವತ್ತು ಉತಾರ ಮಾಡಿಸುವದರಿಂದ ಮೈಕ್ರೋ ಪೈನಾನ್ಸ್ ಗಳ ಹಾವಳಿಯಿಂದ ನಾಗರಿಕರನ್ನು ಪಾರು ಮಾಡಬಹುದು – ರಾಹುಲ್ ಶಿಂಧೆ

ಚಿಕ್ಕೋಡಿ :– ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಚಿಕ್ಕೋಡಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಬೇಟಿ ನೀಡಿದರು ಇ- ಸ್ವತ್ತು ಉತಾರ ಮಾಡಿಸುವದರಿಂದ ಮೈಕ್ರೋ ಪೈನಾನ್ಸ್ ಗಳ ಹಾವಳಿಯಿಂದ ನಾಗರಿಕರನ್ನು ಪಾರು ಮಾಡಬಹುದು. ಇ- ಸ್ವತ್ತು ಉತಾರ ಪಡೆದ ಫಲಾನುಭವಿಗಳು ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸುಲಭವಾಗಿ ಸಾಲಸೌಲಭ್ಯ ದೊರೆಯುತ್ತದೆ ಕಾರಣ ಎಲ್ಲಾ ಗ್ರಾಮ ಪಂಚಾಯತ ಸದಸ್ಯರು ಶ್ರಮಿಸಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ತಿಳಿಸಿದರು. ತಾಲೂಕಿನ ಖಡಕಲಾಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಬ್ಲ್ಯೂ.ಟಿ.ಪಿ ವಾಟರ ಸಪ್ಲಾಯಗೆ ಭೇಟಿ ನೀಡಿ ಪರಿಶೀಲಿಸಿದರು. ಖಡಕಲಾಟ ಗ್ರಾಮ ಪಂಚಾಯತಿ ವ್ತಾಪ್ತಿಯ ಪೀರನವಾಡಿ ಗ್ರಾಮದಲ್ಲಿನ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಅಪೂರ್ಣವಾಗಿದ್ದು ಅದನ್ನು ಪೂರ್ಣಗೊಳಿಸಲು ಕಾರ್ಯಪಾಲಕ ಅಭಿಯಂತರರು ಗ್ರಾ.ಕು.ನೀ & ನೈ ಇಲಾಖೆ ಚಿಕ್ಕೋಡಿ ವಿಭಾಗ ಹಾಗೂ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು. ಮನರೇಗಾ ಯೋಜನೆಗೆ ಸಂಬಂಧಿಸಿದಂತೆ ಖಡಕಲಾಟ, ಪಟ್ಟಣಕುಡಿ ಮತ್ತು ವಾಳಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮುದಾಯ ಕುಡಿಯುವ ನೀರಿನ ಬಾವಿಗೆ ಬೇಡಿಕೆ ಇದ್ದು, ಅಂತಹ ಗ್ರಾಮ ಪಂಚಾಯತಿಗಳ ಕ್ರಿಯಾ ಯೋಜನೆಯನ್ನು ಕೂಡಲೇ ಸಿದ್ದಪಡಿಸಿ, ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆದುಕೊಂಡು ತ್ವರಿತವಾಗಿ ಕಾಮಗಾರಿಯನ್ನು ಪ್ರಾರಂಭಿಸಲು ಕಾರ್ಯನಿರ್ವಾಹಕ ಅಧಿಕಾರಿಗಳು ಚಿಕ್ಕೋಡಿ ತಾಲೂಕ ಪಂಚಾಯತರವರಿಗೆ ಸೂಕ್ತ ನಿರ್ದೇಶನ ನೀಡಿದರು. ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ನವಲಿಹಾಳ ಗ್ರಾಮ ಪಂಚಾಯತಿ ಕಟ್ಟಡ, ಸಂಜೀವಿನಿ ಶೆಡ್, ಗೋದಾಮು ಕಾಮಗಾರಿಗಳನ್ನು ವೀಕ್ಷಿಸಿ, ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕ(ಗ್ರಾ ಉ) ಪಂಚಾಯತ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಂಯೋಜಕ, ತಾಂತ್ರಿಕ ಸಹಾಯಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಶಾಸಕರಾದ ಗಣೇಶ ಹುಕ್ಕೇರಿ, ಚಿಕ್ಕೋಡಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್ ಕಾದ್ರೋಳಿ, , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಿಕ್ಕೋಡಿ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಪಾಂಡುರಂಗರಾವ ಪಂ ರಾ ಇಂಜಿಯನಿಯರ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಪ್ರವೀಣ ಮಠಪತಿ ಸಹಾಯಕ ನಿರ್ದೇಶಕರಾದ( ಗ್ರಾ ಉ) ಶಿವಾನಂದ ಶಿರಗಾಂವೆ, , ಗ್ರಾ.ಕು.ನೀ & ನೈ. ಉಪ ವಿಭಾಗ ದ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಿ.ಡಿ ನಾಯಿಕವಾಡಿ ಗ್ರಾ.ಕು.ನೀ&ನೈ ಇಲಾಖೆ ಚಿಕ್ಕೋಡಿ ವಿಭಾಗದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮನರೇಗಾ ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಂಯೋಜಕ ಆಡಳಿತ ಸಹಾಯಕರು .ತಾಂತ್ರಿಕ ಸಹಾಯಕ ಉಪಸ್ಥಿತರಿದ್ದರು
ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಇದರ ನೂತನ ಅಧ್ಯಕ್ಷರಾಗಿ ಶ್ರೀ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷರಾಗಿ ಶ್ರೀ ಅಶೋಕ ಪಟ್ಟಣಶೆಟ್ಟಿ ಅವಿರೋಧವಾಗಿ ಆಯ್ಕೆ

ಚಿಕ್ಕೋಡಿ :– ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಸಮಗ್ರ ಅಭಿವೃದ್ಧಿ ನಮ್ಮ ಧ್ಯೇಯ ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಇದರ ನೂತನ ಅಧ್ಯಕ್ಷರಾಗಿ ಶ್ರೀ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷರಾಗಿ ಶ್ರೀ ಅಶೋಕ ಪಟ್ಟಣಶೆಟ್ಟಿ ನಮ್ಮ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರಿಗೆ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಅಭಿನಂದನೆ ಸಲ್ಲಿಸಿ, ತಮ್ಮ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಪ್ರಗತಿ ಪಥದಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದ ಕ್ಷಣಗಳು. ನಿಪ್ಪಾಣಿಯ […]
ಮರಾಠಾ ಲೈಟ್ ಇನಫಂಟ್ರಿ (ಮರಾಠಾ ಲಘು ಪದಾತಿದಳ) ವತಿಯಿಂದ “ಮರಾಠಾ ಶೌರ್ಯ ದಿನ” ಮತ್ತು 256 ನೇ ಸಂಸ್ಥಾಪನಾ ದಿನದ ನಿಮಿತ್ಯ ಆಯೋಜನೆ

ಬೆಳಗಾವಿ :– ನಗರದಲ್ಲಿ ಮರಾಠಾ ಲೈಟ್ ಇನಫಂಟ್ರಿ (ಮರಾಠಾ ಲಘು ಪದಾತಿದಳ) ವತಿಯಿಂದ “ಮರಾಠಾ ಶೌರ್ಯ ದಿನ” ಮತ್ತು 256 ನೇ ಸಂಸ್ಥಾಪನಾ ದಿನದ ನಿಮಿತ್ಯ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ನಾಟಕ ‘ಶಿವಗರ್ಜನ’ ನಾಟಕ ಕಾರ್ಯಕ್ರಮವನ್ನು ಮಹಾರಾಷ್ಟ್ರ ರಾಜ್ಯದ ಸಾಂಸ್ಕೃತಿಕ ಮಂತ್ರಿಗಳಾದ ಮಾನ್ಯ ಶ್ರೀ ಆಶಿಷ ಶೇಲಾರ ಜಿ,ಅವರ ಜೊತೆಗೂಡಿ ಕಾರ್ಯಕ್ರಮವನ್ನು ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿದರು. ತಾನಾಜಿ […]
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ ಅವರಿಗೆ ಅತ್ಯುತ್ತಮ ಚುನಾವಣೆ ಪದ್ದತಿಗಳ ಸಹಾಯಕ ಚುನಾವಣಾಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಿಕ್ಕೋಡಿ :– ಅತ್ಯುತ್ತಮ ಚುನಾವಣೆ ಪದ್ದತಿಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ ಅವರಿಗೆ ಅತ್ಯುತ್ತಮ ಚುನಾವಣೆ ಪದ್ದತಿಗಳ ಸಹಾಯಕ ಚುನಾವಣಾಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024-25 ನೇ ಸಾಲಿನ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಯಚೂರಿನಲ್ಲಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವುದನ್ನು ಚುನಾವಣಾ ಆಯೋಗ ಗುರುತಿಸಿದೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಅತ್ಯುತ್ತಮ ಚುನಾವಣೆ ಪದ್ದತಿಗಳ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜ. 25ರಂದು ಬೆಂಗಳೂರಿನಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು […]
ವಿಜಯನಗರ: ಕಲುಷಿತ ನೀರು ಸೇವಿಸಿ 5 ಮಂದಿ ಸಾವು, 50 ಮಂದಿ ಅಸ್ವಸ್ಥ
ಕಲುಷಿತ ನೀರು ಸೇವಿಸಿ 8 ತಿಂಗಳ ಹಸುಗೂಸು ಸೇರಿ 5 ಮಂದಿ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ. ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾದ ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು 8 ತಿಂಗಳ ಗಂಡು ಮಗು ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವನೆಯಿಂದ ಗ್ರಾಮದ ಐವತ್ತಕ್ಕೂ ಹೆಚ್ಚು ಜನರು ಭೇದಿಯಿಂದ ಬಳಲುತ್ತಿದ್ದು, ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ. ಕಳೆದ ವಾರ […]
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ ಅರೆಸ್ಟ್: ಎಂಪಿ ಸೀಟು ಕೊಡಿಸ್ತೀನಿ ಅಂತ 2 ಕೋಟಿ ವಂಚನೆ!
ಲೋಕಸಭೆಗೆ ಟಿಕೆಟ್ ಕೊಡಿಸ್ತೀನಿ ಎಂದು 2 ಕೋಟಿ ರೂ. ಬೇಡಿಕೆ ಇಟ್ಟ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸೋದರ ಗೋಪಾಲ್ ಜೋಶಿ ಅವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ದೇವಾನಂದ್ ಸಿಂಗ್ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗೋಪಾಲ್ ಜೋಷಿ ಅವರನ್ನು ಶನಿವಾರ ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಪಾಲ ಜೋಷಿ […]
ಸಂಚಾರಿ ನಿಯಮ ಉಲ್ಲಂಘಿಸಿದ ಚಾಲಕನಿಗೆ 3 ಮೀ. ಉದ್ದದ ದಂಡ ವಿಧಿಸಿದ ಪೊಲೀಸರು!
ಸಾಮಾನ್ಯವಾಗಿ ಹೆಬ್ಬಾವು ಹಿಡಿದಾಗ ಹಿಡಿದವರು ತಲೆಯಿಂದ ಬಾಲದವರೆಗೂ ಎಲ್ಲರೂ ಹಿಡಿದುಕೊಂಡು ಫೋಟೊಗೆ ಫೋಜ್ ಕೊಡೋದು ಸಾಮಾನ್ಯ. ಆದರೆ ಇಲ್ಲಿ ಪೊಲೀಸರು ಹೆಬ್ಬಾವು ಹಿಡಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ ರಸೀದಿಯನ್ನು ಹಿಡಿದು ಫೋಜ್ ಕೊಟ್ಟಿದ್ದಾರೆ. ಹೌದು, ಪದೇಪದೆ ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ನೀಡಿದ ದಂಡದ ಬಿಲ್ ಉದ್ದ ನೋಡಿ ಆಶ್ಚರ್ಯಚಕಿತರಾದ ಪೊಲೀಸರು ಚಾಲಕನ ಜೊತೆ ಬಿಲ್ ಹಿಡಿದು ಫೋಟೊ ತೆಗೆಸಿಕೊಂಡಿದ್ದಾರೆ. ಶಿವಮೊಗ್ಗದ ಸಂಚಾರಿ ಪೊಲೀಸರು ಸುಮಾರು 3 ಮೀಟರ್ ಉದ್ದದ ಸಂಚಾರಿ ನಿಯಮದ ಬಿಲ್ ಕೊಟ್ಟು […]
ಭವಾನಿ ರೇವಣ್ಣಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ರದ್ದುಪಡಿಸಲು ಸುಪ್ರೀಂಕೋರ್ಟ್ ನಕಾರ
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವೆ ಎಚ್.ಡಿ. ರೇವಣ್ಣ ಪತ್ನಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಅವರಿಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಎಸ್ ಐಟಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ […]
ಕಲಬುರಗಿಯಲ್ಲಿ ಕಾರು-ಬೈಕ್-ಲಾರಿ ಸರಣಿ ಅಪಘಾತ: ನಾಲ್ವರ ದುರ್ಮರಣ
ಕಾರು, ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ ಕಲಬುರಗಿ ತಾಲೂಕಿನ ಹಸನಾಪುರ ಬಳಿ ಸಂಭವಿಸಿದೆ. ಬೈಕ್ ಮತ್ತು ಕಾರಿನಲ್ಲಿದ್ದ ರಾಘವೇಂದ್ರ (35), ಮುಜಾಹಿದ್ (30), ಹುಸೇನ್ ಬಿ (45) ಮತ್ತು ಮೌಲಾಬಿ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಪರಮಾನಂದ ಹಾಗೂ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮಕ್ಕೆ ಕಾರಲ್ಲಿ ತೇರಳುತ್ತಿದ್ದರು. ಸ್ಥಳಕ್ಕೆ ಕಲಬುರಗಿ ಪೊಲೀಸ್ […]