ಬೆಳಗಾವಿ :–
ನಗರದಲ್ಲಿ ಮರಾಠಾ ಲೈಟ್ ಇನಫಂಟ್ರಿ (ಮರಾಠಾ ಲಘು ಪದಾತಿದಳ) ವತಿಯಿಂದ “ಮರಾಠಾ ಶೌರ್ಯ ದಿನ” ಮತ್ತು 256 ನೇ ಸಂಸ್ಥಾಪನಾ ದಿನದ ನಿಮಿತ್ಯ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ನಾಟಕ ‘ಶಿವಗರ್ಜನ’ ನಾಟಕ ಕಾರ್ಯಕ್ರಮವನ್ನು ಮಹಾರಾಷ್ಟ್ರ ರಾಜ್ಯದ ಸಾಂಸ್ಕೃತಿಕ ಮಂತ್ರಿಗಳಾದ ಮಾನ್ಯ ಶ್ರೀ ಆಶಿಷ ಶೇಲಾರ ಜಿ,ಅವರ ಜೊತೆಗೂಡಿ ಕಾರ್ಯಕ್ರಮವನ್ನು ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿದರು.

ತಾನಾಜಿ ಮಾಲುಸಾರೆ ಮರಾಠಾ ಸಾಮ್ರಾಜ್ಯದ ಮಿಲಿಟರಿ ಕಮಾಂಡರ್ ಮತ್ತು ಶಿವಾಜಿಯ ಒಡನಾಡಿಯಾಗಿದ್ದರು. ತಮ್ಮ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದರೂ ಸಹ,ಛತ್ರಪತಿ ಶಿವಾಜಿಮಹಾರಾಜರ ಆಜ್ಞೆ ಪಾಲಿಸಿ,ಯುದ್ಧ ಮಾಡಿ ಸಿಂಘಡ್ ಕೋಟೆಯನ್ನು ವಶಪಡಿಸಿಕೊಂಡರು. ತಮ್ಮ ಜೀವನವನ್ನೇ ಶಿವಾಜಿ ಮಹಾರಾಜರ ಸಲುವಾಗಿ ಅರ್ಪಣೆ ಮಾಡಿ, ಅವರ ಹೆಸರು ಇಂದಿಗೂ ಸ್ಮರಣಿಯವಾಗಿದೆ. ಈ ನಿಟ್ಟಿನಲ್ಲಿ ನರವೀರ ತಾನಾಜಿ ಮಾಲುಸರೆ ಅವರ ಕುರಿತ ಅಂಚೆ ಚೀಟಿಯನ್ನು ಅನಾವರಣಗೊಳಿಸಲಾಯಿತು. ಛತ್ರಪತಿ ಶಿವಾಜಿ ಮಹಾರಾಜರ ಅವರ ಜೀವನ ಆಧರಿಸಿದ ಭವ್ಯ ನಾಟಕ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಂದಿನ ಯುವ ಪೀಳಿಗೆಗೆ ಶಿವಾಜಿ ಮಹಾರಾಜರ ಜೀವನ ಚರಿತ್ರೆ ತಿಳಿಸುವ ನಿಟ್ಟಿನಲ್ಲಿ “ಶಿವಗರ್ಜನ”ನಾಟಕವನ್ನು ಆಯೋಜಿಸಿದ ಮರಾಠಾ ಲೈಟ್ ಇನಫಂಟ್ರಿ ಕಾರ್ಯ ಶ್ಲಾಘನೀಯ.
ಈ ಸಂದರ್ಭದಲ್ಲಿ ಮರಾಠಾ ಲಘು ಪದಾತಿದಳ ಬೆಳಗಾವಿ ಬ್ರಿಗೇಡಿಯರ್ ಕಮಾಂಡರ್ ಶ್ರೀ. ಜೋಯ್ದೀಪ್ ಮುಖರ್ಜಿ, ಅಂಚೆ ಸೇವೆ ಉತ್ತರ ಕರ್ನಾಟಕ ಧಾರವಾಡದ ನಿರ್ದೇಶಕರಾದ ಶ್ರೀಮತಿ ವಿ. ತಾರಾ, ಸಾಂಸ್ಕೃತಿಕ ವಿಭಾಗ ಮತ್ತು ನಿರ್ದೇಶನಾಲಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಕಾಸ ಖರ್ಗೆ,ನಿರ್ದೇಶಕರಾದ ಶ್ರೀ. ವಿಭೀಷಣ ಚಾವರೆ ಹಾಗೂ ತಾನಾಜಿ ಮಾಲುಸಾರೆ ವಂಶಸ್ಥರಾದ ಶೀತಲತಾಯಿ ಮಾಲುಸಾರೆ,ಗಣ್ಯರು,ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.