ಚಿಕ್ಕೋಡಿ :-
ರಥಸಪ್ತಮಿಯ ನಿಮಿತ್ಯ ೧೦೮ ಸೂರ್ಯ ನಮಸ್ಕಾರ
ಪ್ರತಿದಿನ ಸೂರ್ಯ ನಮಸ್ಕಾರದ ಅಭ್ಯಾಸ ನಮ್ಮ ಅನೇಕ ಮನೋದೈಹಿಕ ಕಾಯಿಲೆಗಳನ್ನು ದೂರಗೊಳಿಸಿ ಶರೀರವನ್ನು ಸದೃಢ ಮಾಡುತ್ತದೆ ಕಾರಣ ಇಂದಿನ ಯುವಕರು ಕಡ್ಡಾಯವಾಗಿ ಸೂರ್ಯ ನಮಸ್ಕಾರವನ್ನು ತಮ್ಮ ದೈನಂದಿನ ಜೀವನ ಶೈಲಿಯ ಕ್ರಮವಾಗಿ ರೂಢಿಸಿಕೊಳ್ಳಬೇಕೆಂದು
ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಕಿರಣಕುಮಾರ ಮುತ್ನಾಳಿ ಹೇಳಿದರು ಅವರು ಸ್ಥಳೀಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸ್ವಸ್ಥವೃತ್ತ ಹಾಗೂ ಯೋಗ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರಥಸಪ್ತಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ೧೦೮ ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ ಮಾಡಿದರು ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀ ಸುದರ್ಶನ ಭಟ್ ಸೂರ್ಯ ದೇವರಿಗೆ ಅರ್ಘ್ಯ ಪ್ರದಾನ ಮಾಡಿದರು. ಯೋಗ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಚಡಿ ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ ನೀಡಿದರು ಡಾ. ಜೀವನ ಕುಮಾರ್ ಗಡಗೆ ಸ್ವಾಗತ ಕೋರಿದರು, ಡಾ. ಸಂತೋಷ ಶಿವಣ್ಣವರ ವಂದಿಸಿದರು. ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.