ಟಾಯ್ಲೆಟ್ ಫ್ಲಶ್‌ನಲ್ಲಿ ಎರಡು ಗುಂಡಿಗಳಿವೆ. ನೀವು ಸಣ್ಣ ಫ್ಲಶ್ ಬಟನ್ ಒತ್ತಿದಾಗ, ಶೌಚಾಲಯವನ್ನು ಸ್ವಚ್ಛಗೊಳಿಸಲು ಸುಮಾರು 3 ಲೀಟರ್ ನೀರು ಬರುತ್ತದೆ.
ಅದೇ ರೀತಿ ನೀವು ದೊಡ್ಡ ಬಟನ್ ಒತ್ತಿದಾಗ ಸುಮಾರು 6 ಲೀಟರ್ ನೀರು ಬರುತ್ತದೆ. ಒಟ್ಟಾರೆ ಈ ಎರಡೂ ಗುಂಡಿಗಳನ್ನು ಕಡಿಮೆ ಮತ್ತು ಹೆಚ್ಚು ನೀರನ್ನು ಬಿಡುಗಡೆ ಮಾಡಲು ಬಳಸಲಾಗುತ್ತದೆ. ಸಾಮಾನ್ಯವಾಗಿ, ಮೂತ್ರ ವಿಸರ್ಜನೆಯ ನಂತರ ಜನರು ಚಿಕ್ಕ ಬಟನ್ ಒತ್ತಬೇಕು. ಇದರಿಂದ ನೀರು ಕಡಿಮೆ ಬಿಡುಗಡೆಯಾಗುತ್ತದೆ. ಮಲವಿಸರ್ಜನೆಯ ನಂತರ ಹೆಚ್ಚು ನೀರು ಹೊರ ಬರಲು ಮತ್ತು ಶೌಚಾಲಯವನ್ನು ಸ್ವಚ್ಛಗೊಳಿಸಲು ಸಾಧ್ಯವಾದಷ್ಟು ದೊಡ್ಡ ಬಟನ್ ಒತ್ತಬೇಕು. ಒಂದು ವೇಳೆ ಎರಡೂ ಗುಂಡಿಗಳನ್ನು ಒತ್ತಿದಾಗ, ವಿಭಿನ್ನ ಪ್ರಮಾಣದ ನೀರು ಹೊರಬರುತ್ತದೆ.
ವಾಸ್ತವವಾಗಿ ಇಂದಿನ ಕಾಲದಲ್ಲಿ ನೀರಿನ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಡ್ಯುಯಲ್ ಫ್ಲಶ್ ವ್ಯವಸ್ಥೆಯು ತುಂಬಾ ಉಪಯುಕ್ತವಾಗಿದೆ.
ಇದು ಪ್ರತಿ ಬಾರಿ 3 ರಿಂದ 6 ಲೀಟರ್ ನೀರನ್ನು ಉಳಿಸಬಹುದು. ನೀವು ದಿನವಿಡೀ ಹಲವಾರು ಬಾರಿ ಶೌಚಾಲಯವನ್ನು ಬಳಸಿದರೆ ಮತ್ತು ಸರಿಯಾದ ಬಟನ್ ಒತ್ತಿದರೆ, ಪ್ರತಿ ತಿಂಗಳು ನೂರಾರು ಲೀಟರ್ ನೀರನ್ನು ಉಳಿಸಬಹುದು.
ಡ್ಯುಯಲ್ ಫ್ಲಶ್ ವ್ಯವಸ್ಥೆಯು ನಿಮ್ಮ ಮನೆಯಲ್ಲಿ ನೀರನ್ನು ಉಳಿಸುವಲ್ಲಿ ಸಹಾಯ ಮಾಡುವುದಲ್ಲದೇ, ವಾತಾವರಣವನ್ನು ಕಾಪಾಡುವಲ್ಲಯೂ ಸಹಾಯ ಮಾಡುತ್ತದೆ