ಬೆಂಗಳೂರು :–
ಕರ್ನಾಟಕದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಅವರನ್ನು ಆಸ್ತಿ ವಿಚಾರಕ್ಕೆ ಅವರ ಹೆಂಡತಿ ಪಲ್ಲವಿ ಹಾಗೂ ಅವರ ಮಗಳು ಕೃತಿ ಇಬ್ಬರೂ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ತಾಯಿ, ಮಗಳು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಓಂ ಪ್ರಕಾಶ್ ಅವರ ಕೊಲೆ ನಡೆದ ವೇಳೆ ಮನೆಯಲ್ಲಿ ಓಂ ಪ್ರಕಾಶ್, ಅವರ ಪತ್ನಿ ಪಲ್ಲವಿ ಹಾಗೂ ಮಗಳು ಕೃತಿ ಮೂವರೇ ಇದ್ದರು. ಮಗ ಕಾರ್ತಿಕ್ ಮತ್ತು ಸೊಸೆ ಮನೆಯಲ್ಲಿ ಇರಲಿಲ್ಲ. ತನ್ನೆಲ್ಲಾ ಆಸ್ತಿಯನ್ನು ಮಗನ ಹೆಸರಿಗೆ ಬರೆದಿದ್ದಕ್ಕೆ ಮಗಳು ಕೂಡ ಕೋಪಗೊಂಡಿದ್ದಳು. ಮಗಳಿಗೆ ಆಸ್ತಿ ಕೊಡದಿದ್ದಕ್ಕೆ ಹೆಂಡತಿ ಪಲ್ಲವಿಯೂ ಬೇಸತ್ತಿದ್ದಳು. ಹೀಗಾಗಿ, ತನಗೆ ಹಾಗೂ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡುವಂತೆ ಹೆಂಡತಿ ಜಗಳ ಮಾಡುತ್ತುದ್ದಳು. ಇದೇ ಆಸ್ತಿ ವಿಚಾರವಾಗಿ ತಾಯಿ, ಮಗಳು ಇಬ್ಬರೂ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಓಂ ಪ್ರಕಾಶ್ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರಂಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದ ಅವರ ಹೆಂಡತಿ ಪಲ್ಲವಿ ಅವರನ್ನು ಮಾತ್ರ ವಶಕ್ಕೆ ಪಡೆಯಲಾಗಿತ್ತು. ಇದಾದ ನಂತರ, ಕೊಲೆ ನಡೆದ ವೇಳೆ ಮನೆಯಲ್ಲಿದ್ದ ಹಾಗೂ ಆಸ್ತಿ ವಿಚಾರಕ್ಕೆ ತಂದೆಯೊಂದಿಗೆ ಜಗಳವನ್ನೂ ಮಾಡಿದ್ದ ಮಗಳು ಕೂಡ ಮನೆಯಲ್ಲಿದ್ದಳು. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ನಿವೃತ್ತ ಜೀವನದಲ್ಲಿ ನೆಮ್ಮದಿ ಇಲ್ಲವೆಂದು ನರಳಾಡುತ್ತಿದ್ದರು. ಹಲವು ಬಾರಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮನೆಯಲ್ಲಿ ಹೆಂಡತಿಯ ಟಾರ್ಚರ್ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲವೆಂದು ಹೇಳಿಕೊಂಡಿದ್ದರು.
ಓಂ ಪ್ರಕಾಶ್ ಅವರ ಕುಟುಂಬವು ಹೆಚ್‌ಎಸ್‌ಆರ್ ಬಡಾವಣೆಯ 3 ಮಹಡಿಯ ಮನೆಯಲ್ಲಿ ವಾಸವಾಗಿದ್ದರು. ಕೆಳ ಮಹಡಿಯಲ್ಲಿ ಕೊಲೆ ಓಂ ಪ್ರಕಾಶ್ ಮತ್ತು ಪತ್ನಿ ವಾಸವಾಗಿದ್ದು, ಇದೇ ಮಹಡಿಯಲ್ಲಿ ಗಂಡನನ್ನು ಪತ್ನಿ ಕೊಲೆ ಮಾಡಿದ್ದಾರೆ. ಚಾಕು ಚುಚ್ಚಿದ ಬಳಿಕ ಚೀರಾಟ ಹೆಚ್ಚಾಗಿದ್ದರಿಂದ ಬೇರೆಯವರಿಗೆ ಕೇಳಬಾರದು ಎಂದು ಅವರ ಗಂಡನ ಮುಖ ಹಾಗೂ ಬಾಯಿಗೆ ಬಟ್ಟೆ ಕಟ್ಟಿದ್ದರು ಎಂದು ಹೇಳಲಾಗುತ್ತಿದೆ

ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಅವರೇ ಕೊಲೆ ಮಾಡಿದ ಬಳಿಕ ಮತ್ತೊಬ್ಬ ನಿವೃತ್ತ ಡಿಜಿಯ ಪತ್ನಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇದಾದ ಬಳಿಕ ಬೆಂಗಳೂರಿನ ಸ್ಥಳೀಯ ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪತ್ನಿ ಪಲ್ಲವಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಗಂಟೆಗಳ ನಂತರ ಓಂ ಪ್ರಕಾಶ್ ಮಗಳು ಕೃತಿ ಅವರನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಮಗಳ ಹೆಸರಿಗೆ ಆಸ್ತಿ ಮಾಡದೇ ಇರೋ ಅಸಮಾಧಾನ ಮಗಳಿಗೂ ಇತ್ತು. ಇದೇ ವಿಚಾರವಾಗಿ ಗಂಡನ ಜೊತೆ ಜಗಳವಾಗುತ್ತಿತ್ತು. ಹೀಗಾಗಿ, ತವರು ಮನೆಗೆ ಬಂದು ತಾಯಿಯೊಂದಿಗೆ ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಹೆಂಡತಿ, ಮಗಳಿಗೆ ಆಸ್ತಿ ಕೊಡದೇ ಮಗ ಮತ್ತು ಸಹೋದರಿಯರಿಗೆ ಆಸ್ತಿ ಕೊಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದಾಂಡೇಲಿಯಲ್ಲಿ ಇದ್ದ ಆಸ್ತಿಯನ್ನು ಓಂ ಪ್ರಕಾಶ್ ತಮ್ಮ ತಂಗಿಯರಿಗೆ ಕೊಟ್ಟಿದ್ದರು. ತಂಗಿಯರ ಹೆಸರಿಗೆ ಯಾಕೆ ಆಸ್ತಿ ಮಾಡಿದ್ದೀರಾ? ಅನ್ನೊ ವಿಚಾರಕ್ಕೆ ಹಲವು ದಿನಗಳಿಂದ ಹೆಂಡತಿ ಗಲಾಟೆ ಮಾಡುತ್ತಿದ್ದರು. ತಂಗಿಯರ ವಿಚಾರ ಮಾತಾಡಬೇಡ ಎಂದು ಓಂ ಪ್ರಕಾಶ್ ಈ ಹಿಂದೆ ಪತ್ನಿಗೆ ವಾರ್ನ್ ಮಾಡಿದ್ದರ
ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಬೆಂಗಳೂರಿನಲ್ಲಿ ಇದೆ. ಕಾವೇರಿ ಜಂಕ್ಷನ್‌ನಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್ ಇದೆ. ಹೆಚ್.ಎಸ್.ಆರ್ ಲೇಔಟ್ ನ ಐಪಿಎಸ್ ಕ್ವಾಟ್ರಸ್‌ನಲ್ಲಿ ಮನೆ ಇದೆ. ಈ ಮನೆಯಲ್ಲಿ ಗಲಾಟೆ ಆದಾಗ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ಓಂ ಪ್ರಕಾಶ್ ಹೋಗಿ ವಾಸ ಮಾಡುತ್ತಿದ್ದರು.
ಗಂಡನಿಗೆ 10 ಬಾರಿ ಚಾಕು ಇರಿದ ಪತ್ನಿ

ಓಂ ಪ್ರಕಾಶ್ ಅವರಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಆದರೆ, ಪ್ರಾಥಮಿಕ ತನಿಖೆ ವೇಳೆ 8-10 ಬಾರಿ ಚಾಕು ಇರಿತವಾಗಿರುವುದು ಬೆಳಕಿಗೆ ಬಂದಿದೆ. ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಚಾಕು ಇರಿತವಾಗಿದೆ. ಹೊಟ್ಟೆ ಭಾಗಕ್ಕೆ ಸುಮಾರು 5 ಬಾರಿ ಚಾಕು ಇರಿಯಲಾಗಿದೆ. ಹೊಟ್ಟೆ ಭಾಗಕ್ಕೆ ಹೆಚ್ಚು ಚಾಕು ಇರಿದ ಕಾರಣ ತೀವ್ರ ರಕ್ತಸ್ರಾವವಾಗಿದೆ. ಕೊಲೆ ನಡೆದ ಕೆಳಗಿನ ಮಹಡಿಯ ಹಾಲ್ ತುಂಬಾ ರಕ್ತ ಹರಿದಾಡಿದೆ. ಸುಮಾರು 15-20 ನಿಮಿಷಗಳ ಕಾಲ ಓಂ ಪ್ರಕಾಶ್ ಒದ್ದಾಡಿದ್ದಾರೆ. ಈ ವೇಳೆ ಗಂಡನ ನರಳಾಟ ನೋಡುತ್ತಾ ನಿಂತಿದ್ದ ಪತ್ನಿ, ಮುಖಕ್ಕೆ ಬಟ್ಟೆ ಕಟ್ಟಿದ್ದಾರೆ. ಕೊನೆಗೆ ಗಂಡ ಸಾವನ್ನಪ್ಪಿದ ಬಳಿಕ ಐಪಿಎಸ್ ಅಧಿಕಾರಿ ಪತ್ನಿಗೆ ಕಾಲ್ ಮಾಡಿದ್ದಾರೆ. ನಂತರ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.