“ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿವ ಬಸವ ಜಯಂತಿ ಕಾರ್ಯಕ್ರಮ”

ಚಿಕ್ಕೋಡಿ :–

“ಶಿವ ಬಸವ ಜಯಂತಿ ಆಚರಣೆ”

ಕಾಯಕವೇ ಕೈಲಾಸ ಎನ್ನುತ್ತಾ ಸಕಲರಿಗೂ ಮಾದರಿಯಾಗಿದ್ದ ಬಸವಣ್ಣನವರ ಆದರ್ಶ ಇಂದಿಗೂ ಪ್ರಸ್ತುತ ಎಂದು ಪ್ರಾಧ್ಯಾಪಕರಾದ ಡಾಕ್ಟರ್ ಎನ್ ಎಸ್ ಶಿಂಧೆ ಹೇಳಿದರು.
ಸ್ಥಳೀಯ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ

ಮಾತನಾಡಿದ ಅವರು ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳಿಂದಲೇ ಪ್ರಸಿದ್ದಿಯಾದವರು ಸಮಾಜದ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು ಸಮಾನತೆ ಇರಬೇಕು ಎಂದು ಬಯಸಿ ಅದಕ್ಕಾಗಿಯೇ ಶ್ರಮಿಸಿದರು .

ಛತ್ರಪತಿ ಶಿವಾಜಿ ಅವರು ಹಿಂದೂ ಸಮಾಜದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದರು ಇಂಥ ಮಹಾಪುರುಷರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಅನುಸೂಯ ಕಾನಪುರಿ ಬಸವಣ್ಣನವರ ವಚನಗಳನ್ನು ಹೇಳಿದರು .

ಪ್ರಾಧ್ಯಾಪಕರಾದ ಡಾ. ಕನಕಾಚಲ ಕನಕಗಿರಿ ಅವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುಜಾತ ಚಂದಗಡೆ ಎಂ.ಎಚ.ರಾವುತ ಕವಿತಾ ಹರಕೆ,ಆಸ್ಮಾ ಜಮಾದಾರ್, ಪ್ರಶಾಂತ್ ಪತ್ತಾರ್ ಕೃಷ್ಣ ಅರಗೆ ಇತರರು ಉಪಸ್ಥಿತರಿದ್ದರು .ಕಾರ್ಯಕ್ರಮವನ್ನು ಅನಿತಾ ಪೋದಾರ್ ನಿರೂಪಿಸಿದರು. ಅಶ್ವಿನಿ ಬಿಳಿಗಿ ವಂದಿಸಿದರು.

Share this post:

Leave a Reply

Your email address will not be published. Required fields are marked *