ನಿಪ್ಪಾಣಿ :–
ಛತ್ರಪತಿ ಶಿವಾಜಿ ಮಹಾರಾಜರ ನಂತರ ಹಿಂದೂತ್ವದ ರಕ್ಷಣೆ ಮಾಡಿದ ಶ್ರೀ ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು
ಇಂದು ನಿಪ್ಪಾಣಿ ನಗರದಲ್ಲಿ ದೇಶದ ಹಾಗೂ ಧರ್ಮದ ರಕ್ಷಣೆ ಸಲುವಾಗಿ ತನ್ನ ಪ್ರಾಣವನ್ನೆ ಬಲಿದಾನ ನೀಡಿದ ಮಹಾಪರಾಕ್ರಮಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ನಂತರ ಹಿಂದೂತ್ವದ ರಕ್ಷಣೆ ಮಾಡಿದ ಶ್ರೀ ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಛತ್ರಪತಿ ಸಂಭಾಜಿ ಮಹಾರಾಜರ ಜೀವನವು ಅವರ ಶೌರ್ಯ ಮತ್ತು ನಿರ್ಣಯದಿಂದ ಯುವ ಪೀಳಿಗೆಗೆ ಸ್ಫೂರ್ತಿದಾಯಕ ಹಾಗು ಸದಾ ಪ್ರೇರಣೆ.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರು, ಸದಸ್ಯರು,ಸ್ಥಳೀಯ ಮುಖಂಡರು, ಗಣ್ಯರು,ಉಪಸ್ಥಿತರಿದ್ದರು.