ಅರಿವಳಿಕೆಶಾಸ್ತ್ರ ಮತ್ತು ಇಂಟರ್ವೆನ್ನನಲ್ ಪೇನ್ ಮೆಡಿಸಿನ್‌ನ ಎಂಡಿ ಡಾ. ಕುನಾಲ್ ಸೂದ್ ಅವರ ಪ್ರಕಾರ, ಮಲಗುವ ಸಮಯಕ್ಕೆ ಒಂದೆರಡು ಗಂಟೆಗಳ ಮೊದಲು,
ಬಿಸಿನೀರಿನ ಸ್ನಾನ ಮಾಡುವುದರಿಂದ ನಿದ್ರೆ ವೇಗವಾಗಿ ಆಗಲು ಸಹಾಯವಾಗುತ್ತದೆ.
ಬಿಸಿನೀರಿನ ಸ್ನಾನ ಮಾಡುವುದರಿಂದ ರಕ್ತನಾಳಗಳು ತೆರೆಯುತ್ತವೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ,
ಇದು ಮೆದುಳಿಗೆ ವಿಶ್ರಾಂತಿ ನೀಡುತ್ತದೆ ಮತ್ತು ನಿದ್ರೆಯನ್ನು ಪ್ರೇರೇಪಿಸುವ ಮೆಲಟೋನಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ ಎಂದು ಅವರು ಹೇಳಿದರು.