ವಾರಕ್ಕೆ 52 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುವುದರಿಂದ ವ್ಯಕ್ತಿಯ ಮೆದುಳಿನ ರಚನೆ ಬದಲಾಗಬಹುದು
ಎಂದು ಆಕ್ಯುಪೇಷನಲ್ ಅಂಡ್ ಎನ್ವಿರಾನ್ಮಂಟಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ. ಅತಿಯಾದ ಕೆಲ ಸಮಸ್ಯೆ ಪರಿಹಾರ ಮತ್ತು ಸ್ಮರಣೆಗೆ ಸಂಬಂಧಿಸಿದ ಮೆದುಳಿನ ಭಾಗಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು
ಎಂದು ಅಧ್ಯಯನ ತಿಳಿಸಿದೆ. ದಕ್ಷಣ ಕೊರಿಯಾದ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ.