ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿದಿನ 7,000 ಹೆಜ್ಜೆಗಳು ನಡೆಯುವುದರಿಂದ
13 ವಿವಿಧ ರೀತಿಯ ಕ್ಯಾನ್ಸರ್‌ಗಳ ಅಪಾಯವು ಶೇ.11ರಷ್ಟು ಕಡಿಮೆಯಾಗುತ್ತದೆ. 9,000 ಹೆಜ್ಜೆಗಳೊಂದಿಗೆ, ಕ್ಯಾನ್ಸರ್ ಬರುವ ಅಪಾಯವು ಶೇ.16ರಷ್ಟು ಕಡಿಮೆಯಾಗುತ್ತದೆ.

ಆದರೆ ಇದನ್ನು ಮೀರಿದ ಹೆಚ್ಚುವರಿ ಹೆಜ್ಜೆಗಳಿಂದ ಯಾವುದೇ ಹೆಚ್ಚಿನ ಪ್ರಯೋಜನವನ್ನು ಸಂಶೋಧಕರು ಕಂಡುಕೊಂಡಿಲ್ಲ.
ಸುಮಾರು ಆರು ವರ್ಷಗಳ ಅವಧಿಯಲ್ಲಿ 85,000ಕ್ಕೂ ಹೆಚ್ಚು ಜನರನ್ನು ಅಧ್ಯಯನವು ವಿಶ್ಲೇಷಿಸಿದೆ.