ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
*ಶ್ರೀಘ್ರದಲ್ಲೆ ಚಿಕ್ಕೋಡಿ ಪಟ್ಟಣದ ಗುರುವಾರ ಪೇಠೆ ರಸ್ತೆ ಅಗಲೀಕರಣ*
ವಿ ಪ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಪಟ್ಟಣದ ಗುರುವಾರ ಪೇಠನಲ್ಲಿರುವ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಚಿಕ್ಕೋಡಿ ಪಟ್ಟಣದ ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಗುರುವಾರ ಪೇಠ ರಸ್ತೆ ಅಗಲೀಕರಣದ ಬಗ್ಗೆ ಚರ್ಚಿಸಿದರು.
ಶ್ರೀ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೆರಿಯವರ ಪ್ರಯತ್ನದಿಂದ ಚಿಕ್ಕೋಡಿ ಪಟ್ಟಣದ ಗುರುವಾರ ಪೇಠದ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಭೂ ಸ್ವಾಧೀನ ಪರಿಹಾರ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಸುಮಾರು 7 ಕೋಟಿ ರೂ. ನೀಡಲಾಗುವುದು ಎಂದು ಹೇಳಿದರು.
ಗುರುವಾರ ಪೇಠ ರಸ್ತೆ ಅಗಲೀಕರಣದ ವಿಷಯ ತಿಳಿದು ಪಟ್ಟಣದ ವ್ಯಾಪಾರಸ್ಥರು ಸಹಮತದಿಂದ ಒಪ್ಪಿಗೆ ಸೂಚಿಸಿ ಹರ್ಷ ವ್ಯಕ್ತಪಡಿಸಿದರು.
ಗುರುವಾರ ಪೇಠ ರಸ್ತೆಯಲ್ಲಿ ಹೊಸ ಮಾದರಿಯ ಭೂಗತ ವಿದ್ಯುತ್ ಕೇಬಲ್ ಅಳವಡಿಕೆಯ ತಂತ್ರಜ್ಞಾನದ ಮೂಲಕ ಬೀದಿ ದೀಪಗಳನ್ನು ಅಳವಡಿಸಲಾಗುವುದು ಹಾಗೂ ಜನದಟ್ಟಣೆ ತಗ್ಗಿಸಲು ಅತಿ ಶೀಘ್ರದಲ್ಲಿಯೇ ಗುರುವಾರ ಪೇಠ ರಸ್ತೆಯ ಅಗಲೀಕರಣ ಮಾಡಿ ವ್ಯಾಪಾರಿಗಳಿಗೆ ಹಾಗೂ ನಗರದ ಜನತೆಗೆ ಅನುಕೂಲ ಕಲ್ಪಿಸಲಾಗುವುದು.ಎಂದು ಹೇಳಿದರು.ತಹಶೀಲ್ದಾರಾದ ಸಿ ಎಸ್ ಕುಲಕರ್ಣಿ,ಪುರ ಸಭೆ ಸದಸ್ಯರು ಹಾಗೂ ವ್ಯಾಪಾರಸ್ಥರು ಉಪಸ್ಥಿತರಿದ್ದರು.
+ There are no comments
Add yours