ಬೆಂಗಳೂರು :–
ಗ್ಯಾಸ್ ಸಿಲೆಂಡರ್ ಡೆಲಿವರಿ ಮಾಡಲು ಬಂದ ಬಾಯ್ ನಿಂದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಪೊಲಿಸ್ ಠಾಣೆ ಹದ್ದಿ ಯಲ್ಲಿ ನಡೆದಿದ್ದು ಶುಕ್ರವಾರ ತಿಳಿದುಬಂದಿದೆ. ಡೆಲಿವರಿ ಬಾಯ್ ಮಹೇಶ್ ಎಂಬಾತ ಈ ಕೃತ್ಯ ಎಸಗಿದ್ದು ಈತನನ್ನು ಬಂಧಿಸಲಾಗಿದೆ.

52 ವರ್ಷದ ಮಹಿಳೆಯ ಮನೆಗೆ ಸಿಲಿಂಡರ್ ಕೊಡಲು ಬಂದಿದ್ದ ವೇಳೆ, ಅಡುಗೆಮನೆ ಫೋಟೋ ತೆಗೆದು ಗ್ಯಾಸ್ ಏಜೆನ್ಸಿಗೆ ಅಪ್ ಲೋಡ್ ಮಾಡಬೇಕು, ಗಾಳಿ-ಬೆಳಕು ಸರಿಯಾಗಿದೆಯೇ ಎಂಬುದಕ್ಕಾಗಿವ ಪರಿಶೀಲಿಸ ಬೇಕು ಅಂತ ಹೇಳಿ
ಮನೆಯೊಳಕ್ಕೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಹಕರಿಸದಿದ್ದರೆ ಕೊಲೆ ಮಾಡುವುದಾಗಿ ಮಹೇಶ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರು ಕೊಟ್ಟಿದ್ದಾರೆ.