ಬೆಂಗಳೂರು :–
ಮಹಾರಾಷ್ಟ್ರದ ಪುಣೆಯ ಇಂದ್ರಯಾಣಿ ನದಿ ಸೇತುವೆ ಈಹೊತ್ತು ಮಧ್ಯಾಹ್ನ ಕುಸಿದಿದ್ದು, ಹಲವು ಜನರು ಮೃತಪಟ್ಟ ಶಂಕೆ ವ್ಯಕ್ತವಾಗಿದೆ.
ಘಟನೆಯಲ್ಲಿ ಸುಮಾರು 6 ಮಂದಿ ಸಾವನ್ನಪ್ಪಿ, ಸುಮಾರು 20 ಜನರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ.
ಸೇತುವೆ ಹಳೆಯದಾಗಿತ್ತು ಎಂದು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ನ್ಯೂಸ್ 18 ಇಂಡಿಯಾಗೆ ತಿಳಿಸಿದ್ದಾರೆ.
ಈಹೊತ್ತು ಭಾನುವಾರ ರಜಾದಿನವಾಗಿದ್ದರಿಂದ ಘಟನೆ ನಡೆದ ಪ್ರದೇಶವು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು ಎಂದು ವರದಿಯಾಗಿದೆ.