“ಕುಂಬಳಕಾಯಿಯ ಆರೋಗ್ಯ ಪ್ರಯೋಜನೆಗಳು“
ಕಣ್ಣಿನ ಆರೋಗ್ಯ
ಕುಂಬಳಕಾಯಿಯಲ್ಲಿ ಬೀಟಾ ಕ್ಯಾರೋಟಿನ್ ಅಂಶ ಹೇರಳವಾಗಿದ್ದು, ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕ್ಯಾನ್ಸರ್
ಸಿಹಿ ಕುಂಬಳಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳನ್ನು ಸಮೃದ್ದವಾಗಿದ್ದು, ಇದು ಕ್ಯಾನ್ಸರ್ ಬರದಂತೆ ರಕ್ಷಿಸುತ್ತದೆ.
ಹೃದಯದ ಆರೋಗ್ಯ
ಸಿಹಿ ಕುಂಬಳಕಾಯಿಯಲ್ಲಿ ಪೊಟ್ಯಾಸಿಯಮ್ ಅಂಶ ಹೇರಳವಾಗಿದ್ದು, ಇದು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಚಯಾಪಚಯ
ಸಿಹಿ ಕುಂಬಳಕಾಯಿ ಅಷ್ಟೇ ಅಲ್ಲ ಅದರ ಬೀಜಗಳಲಲ್ಲಿನ ಅಂಶಗಳು ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಶುಗರ್
ಸಿಹಿ ಕುಂಬಳಕಾಯಿ ಮಧುಮೇಹಿಗಳಿಗೂ ಅದ್ಭುತ ಆಹಾರ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ
ಇದರಲ್ಲಿರುವ ಅಂಶಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಅಷ್ಟೇ ಅಲ್ಲ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.





