ಚಿಕ್ಕೋಡಿ :–
ರಾಮಕೃಷ್ಣ ಮಿಷನ್, ಬೆಳಗಾವಿಯ ಸ್ವಾಮಿ ಮೋಕ್ಷಾತ್ಮಾನಂದಜೀ ಮಹಾರಾಜರು “ವಿದ್ಯಾರ್ಥಿಗಳ ಭವಿಷ್ಯದ ಹಾದಿ” (Roadmap to Students) ಎಂಬ ವಿಷಯದ ಕುರಿತಾಗಿ ಪ್ರಭಾವಶಾಲಿ ಉಪನ್ಯಾಸವನ್ನು ಕೆ.ಎಲ್.ಇ ಸಂಸ್ಥೆಯ ಚಿದಾನಂದ ಬಿ. ಕೋರೆ ಪಾಲಿಟೆಕ್ನಿಕ್, ಚಿಕ್ಕೋಡಿಯಲ್ಲಿ ಪ್ರಥಮ ವರ್ಷದ ಹೊಸದಾಗಿ ಸೇರಿದ್ದ ವಿದ್ಯಾರ್ಥಿಗಳಿಗಾಗಿ ನೀಡಿದರು.

ಸ್ವಾಮೀಜಿಯವರು ತಮ್ಮ ಉಪನ್ಯಾಸದಲ್ಲಿ, ವಿದ್ಯಾರ್ಥಿಗಳು ಪ್ರಸ್ತುತ ಕ್ಷಣದಲ್ಲಿ ಎಚ್ಚರತೆಯಿಂದ ಹಾಗೂ ಕೇಂದ್ರೀಕೃತ ಮನಸ್ಸಿನಿಂದ ಬದುಕಬೇಕು ಎಂದು ತಿಳಿಸಿದರು. ಭೂತಕಾಲ ಅಥವಾ ಭವಿಷ್ಯಕಾಲದ ಚಿಂತೆಯನ್ನು ತೊರೆದು ‘ಈ ಕ್ಷಣದಲ್ಲೇ ಬದುಕುವುದನ್ನು ಕಲಿಯಿರಿ’ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನುಡಿದರು.
ಕಾರ್ಯಕ್ರಮವು ವ್ಯಕ್ತಿತ್ವ ನಿರ್ಮಾಣ, ಶಿಸ್ತಿನ ಜೀವನಶೈಲಿ, ಮೌಲ್ಯಾಧಾರಿತ ಶಿಕ್ಷಣ ಮತ್ತು ಆತ್ಮಬಲವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ದರ್ಶನ್‌ಕುಮಾರ ಬಿಳ್ಳೂರ ಅವರು ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ, “ಇಂತಹ ಆಧ್ಯಾತ್ಮಿಕ ಮತ್ತು ಪ್ರೇರಣಾದಾಯಕ ಉಪನ್ಯಾಸಗಳು ವಿದ್ಯಾರ್ಥಿಗಳ ಜೀವನದ ದಿಕ್ಕು ನಿರ್ಧರಿಸಲು ಸಹಾಯ ಮಾಡುತ್ತವೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಬೋಧಕ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.