ಜನನಾಂಗದಲ್ಲಿ ಸೋಂಕು ಉಂಟಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು,
ಆತನ ಜನನಾಂಗವನ್ನೇ ಕತ್ತರಿಸಿದ ಘಟನೆ ಅಸ್ಸಾಂನ ಕಾಚಾರ್ ಜಿಲ್ಲೆಯಲ್ಲಿ ನಡೆದಿದೆ. ರೋಗಿಗೆ ಬಯಾಪ್ಪಿ ಮೂಲಕ ಜನನಾಂಗದ ಭಾಗದಲ್ಲಿರುವ ಸ್ವಲ್ಪ ಮಾಂಸವನ್ನು ತೆಗೆಯಲಾಗುತ್ತದೆ ಎಂದು ಮಾಹಿತಿ ನೀಡಿದ್ದು,
ಇದಕ್ಕೆ ಆತನೂ ಒಪ್ಪಿಗೆ ಕೊಟ್ಟಿದ್ದಾನೆ ಆದರೆ ಡಾ. ಈಡನ್ ಸಿನ್ಹಾ ಸಂಪೂರ್ಣ ಜನನಾಂಗವನ್ನೇ ತೆಗೆದು ಹಾಕಿದ್ದು,
ಈ ಬಗ್ಗೆ ವೈದ್ಯರು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ರೋಗಿ ಹೇಳಿದ್ದಾನೆ.