ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸಿ ಬಿಟ್‌ಚಾಟ್‌ನ ಬೀಟಾ ಆವೃತ್ತಿ ಬಿಡುಗಡೆ ಮಾಡಿದ್ದು,
ಇದು ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಅಗತ್ಯವಿಲ್ಲದ ಮೆಸೇಜಿಂಗ್ ಆ್ಯಪ್ ಆಗಿದೆ.
ಇದು ಬ್ಲೂಟೂತ್ ಮೆಶ್ ನೆಟ್ವರ್ಕ್ ಬಳಸುತ್ತದೆ ಮತ್ತು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ.
ಇದಕ್ಕೆ ಸರ್ವರ್, ಅಕೌಂಟ್, ಡೇಟಾ ಸಂಗ್ರಹಣೆಯ ಅಗತ್ಯವಿಲ್ಲ.
ಈ ಅಪ್ಲಿಕೇಶನ್ ವಿಸ್ತ್ರತ ವ್ಯಾಪ್ತಿ ಹೊಂದಿದ್ದು, ಸಮಾನ ವ್ಯವಸ್ಥೆಯ ಮೂಲಕ 300 ಮೀ.ವರೆಗೆ ಸಂದೇಶಗಳನ್ನು ಪ್ರಸಾರ ಮಾಡುತ್ತದೆ ಎಂದು ಡಾರ್ಸಿ ಹೇಳಿದ್ದಾರೆ.





