ಬೆಂಗಳೂರು :–
ಮಳೆಗಾಲದಲ್ಲಿ ಜನರು ನಿರ್ಲಕ್ಷಿಸುವ ಆರೋಗ್ಯಕ್ಕೆ ಹಾನಿಕಾರಕವಾದ ಆರು ಸಾಮಾನ್ಯ ತಪ್ಪುಗಳ ಬಗ್ಗೆ ಎನ್ ಎಚ್ ಎಮ್ ಯು ಪಿ ಹೇಳಿದೆ.
ಇವುಗಳಲ್ಲಿ ನೈರ್ಮಲ್ಯವಿಲ್ಲದ ಬೀದಿಬದಿ ಆಹಾರವನ್ನು ಸೇವಿಸುವುದು,
ಮನೆ/ಕಚೇರಿ ಬಳಿ ನೀರು ಸಂಗ್ರಹವಾಗಲು ಬಿಡುವುದು,
ಒದ್ದೆಯಾದ ಬಟ್ಟೆ/ಸಾಕ್ಸ್‌ಗಳು ದೀರ್ಘಕಾಲ ಒಣಗಲು ಬಿಡದಿರುವುದು,
ಸೊಳ್ಳೆಗಳಿಂದ ನಿಮ್ಮನ್ನು ರಕ್ಷಸಿಕೊಳ್ಳದಿರುವುದು,
ಒದ್ದೆಯಾದ ಬಟ್ಟೆಗಳನ್ನು ಧರಿಸುವುದು ಮತ್ತು ಸರಿಯಾಗಿ ಕೈ ತೊಳೆಯದಿರುವುದು ಸೇರಿವೆ.