ಬೆಂಗಳೂರು :–
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಭಾರತದ ಮೇಲೆ 25% ಸುಂಕ ವಿಧಿಸಿದ್ದು, ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ಭಾರತ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದೆ ಮತ್ತು ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರ ಕೂಡಾ ಆಗಿದೆ. ಇವೆಲ್ಲವೂ ಒಳ್ಳೆಯದಲ್ಲ.
ಆದುದರಿಂದಲೇ ಭಾರತವು 25% ಸುಂಕದ ಜತೆಗೆ ಪೆನಾಲ್ಟಿಯನ್ನೂ ಪಾವತಿಸಲಿದೆ ಎಂದು ಟ್ರಂಪ್ ಹೇಳಿದರು.
“ಭಾರತ ನಮ್ಮ ಸ್ನೇಹಿತನಾಗಿದ್ದರೂ”,
ಅಧಿಕ ಸುಂಕಗಳ ಕಾರಣ ಅವರೊಂದಿಗೆ ವ್ಯವಹಾರ ಕಡಿಮೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.