ಹೊಸ ದಹಲಿ :–
ಉತ್ತರ ಪ್ರದೇಶ ದ ಬುಲಂದ್‌ಶಹರ್‌ನಲ್ಲಿ ೩೦ ವರ್ಷದ ಮಹಿಳೆಯ ಎಮ ಆರ್ ಐ ಸ್ಕ್ಯಾನ್‌ನಲ್ಲಿ ಆಕೆ ೧೨ ವಾರಗಳ ಗರ್ಭಿಣಿ ಎಂದು ಕಂಡುಬಂದಿದ್ದು,
ಆದರೆ ಭ್ರೂಣವು ಗರ್ಭಕೋಶದ ಬದಲು ಅವರ ಯಕೃತ್ತಿನಲ್ಲಿ ಬೆಳೆದಿದೆ. ಭ್ರೂಣವು ಯಕೃತ್ತಿನ ಬಲ ಬದಿಯಲ್ಲಿ ಹುದುಗಿತ್ತು ಮತ್ತು ಹೃದಯ ಬಡಿತ ಸ್ಪಷ್ಟವಾಗಿತ್ತು. ನನ್ನ ವೃತ್ತಿಜೀವನದಲ್ಲಿ ನಾನು ಅಂತಹ ಪ್ರಕರಣವನ್ನು ಎಂದಿಗೂ ನೋಡಿಲ್ಲ
ಎಂದು ರೇಡಿಯಾಲಜಿಸ್ಟ್ ಡಾ. ಕೆ.ಕೆ.ಗುಪ್ತಾ ಹೇಳಿದರು. ಇದನ್ನು ಇಂಟ್ರಾಹೆಪಾಟಿಕ್ ಎಕ್ಟೋಪಿಕ್ ಗರ್ಭಧಾರಣೆ ಎಂದು ಕರೆಯಲಾಗುತ್ತದೆ ತಿಳಿಸಿದರು.