ಚಿಕ್ಕೋಡಿ :–
ಸಂಕೇಶ್ವರ ಪಟ್ಟಣದಲ್ಲಿ ಹುಕ್ಕೇರಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಪ್ರಮುಖರ ಸಭೆ ಹಾಗೂ ಪತ್ರಿಕಾಗೋಷ್ಠಿ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ,
ಮುಂಬರುವ ಹುಕ್ಕೇರಿ ಗ್ರಾಮೀಣ ವಿಧ್ಯುತ್ ಸಹಕಾರಿ ಸಂಘದ ಚುನಾವಣೆ ಕುರಿತು ಕಾರ್ಯಕರ್ತರೊಂದಿಗೆ ಪೂರ್ವ ಸಭೆ ನಡೆಸಿ,ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಕೇಳಿದ್ದು,ಈಗಿನಿಂದಲೇ “ಸಹಕಾರ ಪೇನಲ್ ನಾಮಕರಣ” ಮಾಡಿ ಶೀಘ್ರದಲ್ಲಿ ಪ್ರಚಾರ ಆರಂಭಿಸಲಾಗುವುದು.

ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಯಗೌಡ ಪಾಟೀಲ,ಉಪಾಧ್ಯಕ್ಷರಾದ ಶ್ರೀ ವಿಷ್ಣು ರೆಡಕರ,ಸಂಚಾಲಕರಾದ ಶ್ರೀ ಶಶಿರಾಜ ಪಾಟೀಲ, ಶ್ರೀ ಕುನಾಲ ಪಾಟೀಲ, ಬಸಗೌಡ ಮಗ್ಗೆನ್ನವರ,ಶ್ರೀ ಜೋಮಲಿಂಗ ಪಟೋಳಿ, ಶ್ರೀ ರವಿ ಹಿಡಕಲ,ಶ್ರೀ ರವಿ ಅಸೋದೆ,ಶ್ರೀ ಈರಪ್ಪ ಬಂಜೀರಾಮ, ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ರಾಜೇಂದ್ರ ಪಾಟೀಲ, ಮಾಜಿ ಪುರಸಭೆ ಅಧ್ಯಕ್ಷರಾದ ಶ್ರೀ ಅಮರ ನಲವಡೆ,ಶ್ರೀ ಶ್ರೀಕಾಂತ ಹತ್ತನೂರೆ,ಶ್ರೀ ಸಂಜಯ ಶಿರಕೋಳಿ,ಶ್ರೀ ಅಜಿತ ಕರಜಗಿ, ಶ್ರೀ ಪವನ ಪಾಟೀಲ, ಶ್ರೀ ಶಂಕರರಾವ ಹೆಗಡೆ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.





