ಚಿಕ್ಕೋಡಿ :–
ಡಿಸಿಸಿ ಬ್ಯಾಂಕಿನ ಚುನಾವಣೆಯು ಸಹಕಾರ ಕ್ಷೇತ್ರದ ಚುನಾವಣೆಯಾಗಿದ್ದು, ಇದರಲ್ಲಿ ಯಾವುದೇ ರೀತಿಯಾದ ರಾಜಕೀಯ ಇಲ್ಲ. ರೈತರ ಅನುಕೂಲಕ್ಕಾಗಿ ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಆಯ್ಕೆ ಮಾಡಬೇಕೆಂದು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ಅವರು ನಿಪ್ಪಾಣಿ ತಾಲೂಕಿನ ಅಪಾಚಿವಾಡಿ ಗ್ರಾಮದ ಹಾಲ್ಸಿದ್ದನಾಥ ಸಭಾಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ,ಉಪಾಧ್ಯಕ್ಷ ನಿರ್ದೇಶಕ, ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿಗಳ ಸೌಹಾರ್ದಯುತ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ ರೈತರ ಅಭಿವೃದ್ಧಿಯೇ ಮೂಲ ಉದ್ದೇಶವಾಗಿದೆ. ಹಲವಾರು ವರ್ಷಗಳಿಂದ ಒಳ್ಳೆಯ ರೀತಿಯಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿದೇವೆ.ಇದು ಸಹಕಾರ ಕ್ಷೇತ್ರ ಇರುವುದರಿಂದ ಇಲ್ಲಿ ಯಾವುದೇ ರೀತಿಯಾದ ರಾಜಕೀಯ ಇರುವುದಿಲ್ಲ. ಆ ಕಾರಣಕ್ಕಾಗಿ ಇದರಲ್ಲಿ ರಾಜಕೀಯ ತರುವುದು ಸಮಂಜಸವಲ್ಲ.ಅಣ್ಣಾಸಾಹೇಬ ಜಿ
ಜೊಲ್ಲೆಯವರು ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಉಳ್ಳವರಾಗಿದ್ದಾರೆ. ಅವರ ಮಾರ್ಗದರ್ಶನ ಡಿಸಿಸಿ ಬ್ಯಾಂಕಿಗೆ ಅತ್ಯಂತ ಅವಶ್ಯಕ ಇದೆ. ಈ ನಿಟ್ಟಿನಲ್ಲಿ ಅವರನ್ನು ನಿಪ್ಪಾಣಿ ತಾಲೂಕಿನಿಂದ ಅವರನ್ನು ಆಯ್ಕೆ ಮಾಡಬೇಕೆಂದು ತಮ್ಮಲ್ಲಿ ನಾನು ಮನವಿಯನ್ನು ಮಾಡಿಕೊಳ್ಳುತ್ತೇನೆ ಎಂದರು.

ಬಳಿಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಕಳೆದ 10 ವರ್ಷಗಳಿಂದ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದೇನೆ.ಈ ಬಾರಿ ನಿಪ್ಪಾಣಿ ತಾಲೂಕಿನಿಂದ ಸ್ಪರ್ಧೆಯನ್ನು ಮಾಡುತ್ತಿದೇನೆ.ರೈತರ ಅಭಿವೃದ್ಧಿಯೇ ಈ ಬ್ಯಾಂಕಿನ ಧ್ಯೇಯವಾಗಿದೆ.ಇದರಲ್ಲಿ ಯಾವುದೇ ರಾಜಕೀಯ, ಪಕ್ಷ,ಭೇಧ,ಭಾವ ಸಂಬಂದ ಇಲ್ಲ.ಸಹಕಾರ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತೇನೆ.ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ,ಅಪ್ಪಾಸಾಹೇಬ ಕುಲಗೂಡೆಯವರ ಅಧ್ಯಕ್ಷತೆಯಲ್ಲಿ ನಿಪ್ಪಾಣಿ ತಾಲೂಕಿಗೆ ಹೆಚ್ಚಿನ ಹೆಚ್ಚಿನ ಸದಸ್ಯತ್ವ ಮಾಡಲಾಗಿದೆ ಎಂದರು.
ಬಳಿಕ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಅಣ್ಣಾಸಾಹೇಬ ಜೊಲ್ಲೆ ಯವರು ಕಳೆದ 10 ವರ್ಷಗಳಿಂದ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.ನಿಪ್ಪಾಣಿ ತಾಲೂಕಿಗೆ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಗಳನ್ನು ಮಂಜೂರ ಮಾಡಿ,ರೈತರಿಗೆ ಅನುಕೂಲ ಮಾಡಿದ್ದಾರೆ.ಈ ಬಾರಿ ಅವರು ನಿಪ್ಪಾಣಿ ತಾಲೂಕಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ.ಅವರನ್ನು ಆಯ್ಕೆ ಮಾಡುವಂತೆ ಶಾಸಕಿ ಶಶಿಕಲಾ ಜೊಲ್ಲೆಯವರು ಮನವಿಯನ್ನು ಮಾಡಿದರು.ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಯಾವುದೇ ರಾಜಕೀಯ,ಪಕ್ಷ,ಭೇದ ಭಾವ ಇರುವುದಿಲ್ಲ ಎಂದರು.
ಈ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗೂಡೆ,ರಾಜೇಂದ್ರ ಅಂಕಲಗಿ,ಶಂಕರಗೌಡ ಪಾಟೀಲ, ವಿಕ್ರಮ ಇನಾಮಾದಾರ,ಎಂ.ಪಿ.ಪಾಟೀಲ, ಪವನ ಪಾಟೀಲ, ಎಸ್.ಎಸ್.ಡವಣೆ,ಆನಂದ ಯಾದವ,ಸಿದ್ದು ನರಾಟೆ,ಬಾಳಾಸಾಹೇಬ ಜೋಳಾಪೂರೆ,ಸೋನಲ್ ಕೊಠಡಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





