ಭಾರತ ದೇಶದಲ್ಲಿ ಮೊದಲ ಬಾರಿಗೆ ವಿಮಾನ ಇಂಧನ ತಯಾರಿಸಲು ಅಡುಗೆ ಎಣ್ಣೆಯನ್ನು ಬಳಸಲಾಗುತ್ತಿದೆ.
ಇಂಡಿಯನ್ ಆಯಿಲ್‌ನ ಪಾಣಿಪತ್ ಸಂಸ್ಕರಣಾಗಾರವು ಬಳಸಿದ ಅಡುಗೆ ಎಣ್ಣೆಯನ್ನು ಜೆಟ್ ದರ್ಜೆಯ ಇಂಧನವಾಗಿ ಪರಿವರ್ತಿಸಿ ವಿಮಾನ ಇಂಧನ ತಯಾರಿಸಲು ಪ್ರಮಾಣಪತ್ರವನ್ನು ಪಡೆದಿದ್ದು,
ಇದು ದೇಶದಲ್ಲಿ ಮೊದಲು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದರು.





