ಬೆಂಗಳೂರು :–
ಮಕ್ಕಳಿಗೆ ಮಣ್ಣಿನಲ್ಲಿ ಆಟವಾಡಲು ಅವಕಾಶ ನೀಡಿದರೆ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಮಕ್ಕಳ ತಜ್ಞೆ ಡಾ.ಸುಮಿತ್ರಾ ಮೀನಾ ಹೇಳಿದರು.

ಮಣ್ಣಿನಲ್ಲಿ ಆಟವಾಡುವುದರಿಂದ ಮಕ್ಕಳು ವಿವಿಧ ಬ್ಯಾಕ್ಟಿರಿಯಾಗಳ ಸಂಪರ್ಕಕ್ಕೆ ಬರುತ್ತಾರೆ ಮತ್ತು ಅದರ ವಿರುದ್ಧ ರೋಗನಿರೋಧಕ ವ್ಯವಸ್ಥೆಯು ಬೆಳೆಯುತ್ತದೆ ಎಂದು ಸುಮಿತ್ರಾ ಅವರು ಹೇಳಿದರು.
ಮಣ್ಣಿನಲ್ಲಿ ಆಟವಾಡುವುದರಿಂದ ಮಕ್ಕಳಿಗೆ ಅಲರ್ಜಿ ಮತ್ತು ಆಸ್ತಮಾ ಬರುವ ಅಪಾಯವೂ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು.