ನಿಯಮಿತ ವ್ಯಾಯಾಮವು ಹೃದಯದ ವಯಸ್ಸನ್ನು ೨೦ ವರ್ಷಗಳವರೆಗೆ ಕಡಿಮೆ ಮಾಡುತ್ತದೆ ಎಂದು ಹೃದಯರಕ್ತನಾಳದ ಶಸ್ತ್ರಚಿಕಿತ್ಸಕ ಡಾ. ಜೆರೆಮಿ ಲಂಡನ್ ಹೇಳುತ್ತಾರೆ.
ಇದು ದೀರ್ಘ ಮತ್ತು ಉತ್ತಮ ಜೀವನಕ್ಕೆ ಕಾರಣವಾಗಬಹುದು. ವಯಸ್ಸಾದಂತೆ, ನೀವು ವ್ಯಾಯಾಮ ಮಾಡದಿದ್ದರೆ,
ಹೃದಯ ಸ್ನಾಯು ಗಟ್ಟಿಯಾಗುತ್ತದೆ. ಇದು ಹೃದಯದ ಎಡ ಕುಹರದ ಹಿಗ್ಗುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಹೃದಯಾಘಾತ ಮತ್ತು ಇತರ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದರು





