ಚಿಕ್ಕೋಡಿ ಆ.15 :–
ಸ್ಥಳೀಯ ಚೌಸನ ನರ್ಸರಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನರ್ಸರಿ ಶಾಲೆಯ ನಿರ್ದೇಶಕರಾದ ಸವಿತಾ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅನೇಕ ಜನರ ಪ್ರಾಣ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಬಂದಿದೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅದೇ ರೀತಿಯಾಗಿ ನಮ್ಮ ಭವ್ಯ ಭಾರತದ ಮುಂದಿನ ಭವಿಷ್ಯದ ನಿರ್ಮಾಪಕರು ವಿದ್ಯಾರ್ಥಿಗಳು ಆಗಿದ್ದಾರೆ ಎಂದು ಹೇಳಿದರು ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ವರ್ತಮಾನವನ್ನು ತಿಳಿದುಕೊಂಡು ಭವಿಷ್ಯಕ್ಕಾಗಿ ಬಲವಾದ ಹಸಿರು ಮತ್ತು ನವೀನ ಭಾರತವನ್ನು ನಿರ್ಮಿಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಚೌಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರ ನಾಥ ಟಿ. ಚೌಗುಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವತಂತ್ರ ಸಲುವಾಗಿ ತ್ಯಾಗ ಮಾಡಿದ ನಮ್ಮ ಸ್ವತಂತ್ರ ಹೋರಾಟದ ಮಹಾನ್ ವೀರರ ಧೈರ್ಯ ತ್ಯಾಗ ನಿಸ್ವಾರ್ಥತೆಯನ್ನು ಗೌರವಿಸುವದು ಮುಖ್ಯವಾಗಿದೆ. ಸುಭದ್ರ ಹಾಗೂ ತಂತ್ರಜ್ಞಾನ ಆಧರಿತ ದೇಶದ ನಿರ್ಮಾಣಕ್ಕೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಆಗುವ ಶಿಕ್ಷಣ ನೀಡಬೇಕಾಗಿದೆ. ವಿದ್ಯಾರ್ಥಿಗಳು ಜ್ಞಾನ ಕೌಶಲ್ಯ ನಾವಿನ್ನತೆಯ ದಿಕ್ಕಿನಲ್ಲಿ ಮುಂದುವರೆಯಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ನರ್ಸರಿ ಶಾಲೆಯ ಮಕ್ಕಳು ದೇಶದ ಮಹಾನ್ ನಾಯಕರಾದ ಸಂಗೊಳ್ಳಿ ರಾಯಣ್ಣ ಒನಕೆ ಓಬವ್ವ ಕಿತ್ತೂರು ಚೆನ್ನಮ್ಮ ಭಗತ್ ಸಿಂಗ್ ಸುಭಾಷ್ ಚಂದ್ರ ಬೋಸ್. ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ವೇಷ ಭೂಷಣ ತೊಟ್ಟು ಸ್ವತಂತ್ರ ಹೋರಾಟಗಾರರ ಧ್ಯೇಯ ವಾಕ್ಯಗಳನ್ನು ಪ್ರಸ್ತುತಪಡಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ನರ್ಸರಿ ಶಾಲೆಯ ಶಿಕ್ಷಕರಾದ ಕವಿತಾ ಹರಕೆ ಆಸ್ಮಾ ಜಮಾದಾರ್, ಪ್ರಶಾಂತ ಪತ್ತಾರ್ ಕೃಷ್ಣ ಅರ್ಗೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಜ್ವಲ ಮನೆ ನಿರೂಪಿಸಿದರು.





