ಹುಕ್ಕೇರಿ :–
“ಗ್ರಾಮೀಣ ಜನರ ಏಳಿಗೆಗಾಗಿ ನಿರಂತರ ವಿದ್ಯುತ್ ಲೋಕಾರ್ಪಣೆ”

ತಾಲೂಕಿನ ಎಲಿಮುನ್ನೊಳಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ನಿಯಮಿತ., ಗ್ರಾಮದ ಆಯ್,ಪಿ,ಫೀಡರ್ ಮೇಲೆ ಬರುವ ತೋಟದ 250 ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಪೂರೈಸುವ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಭಾಗವಹಿಸಿ,ಚಾಲನೆ ನೀಡಿ,ಸತ್ಕಾರ ಸ್ವೀಕರಿಸಿ ಮಾತಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಶಶಿಕಾಂತ ನಾಯಿಕ,ಸಚಿವರಾದ ಶ್ರೀ ಸತೀಶ ಜಾರಕಿಹೊಳಿ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಯಗೌಂಡ ಪಾಟೀಲ,ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ರಾಜೇಂದ್ರ ಪಾಟೀಲ,ಹೀರಾ ಶುಗರ ಉಪಾಧ್ಯಕ್ಷರಾದ ಶ್ರೀ ಅಶೋಕ ಪಟ್ಟಣಶೆಟ್ಟಿ, ಶ್ರೀ ಶಶಿರಾಜ ಪಾಟೀಲ,ಶ್ರೀ ವೃಷಭ ಪಾಟೀಲ, ಶ್ರೀ ಪವನ ಪಾಟೀಲ,ಶ್ರೀ ರವಿ ಹಿಡಕಲ್,ಸಹಕಾರಿ ಸಂಘದ ಸದಸ್ಯರು ಉಪಸ್ಥಿತರಿದ್ದರು.





